ಕುಶಾಲನಗರ, ನ 22: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನಲೆ ಹಾಗೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಕ್ಷ ಸಂಘಟನೆ ಮೂಲಕ ಯುವಪಡೆ ರಚನೆ ಮಾಡಲಾಗುತ್ತಿದೆ ಎಂದು ಕೊಡಗು ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ಹೇಳಿದರು.
ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಿಸಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಮತ್ತೊಮ್ಮೆ ಎಚ್.ಡಿ.ಕುಮಾರಸ್ವಾಮಿ ಅವರ ಅಗತ್ಯವಿದೆ. ಕೊಡಗಿನಲ್ಲಿ ತಾಂಡವವಾಡುತ್ತಿರುವ ವಿವಿಧ ಸಮಸ್ಯೆಗಳನ್ನು ನಿವಾರಿಸುವಲ್ಲಿ ನಮ್ಮದೇ ಪಕ್ಷದ ಜನಪ್ರತಿನಿಧಿಗಳನ್ನು ಹುಟ್ಟುಹಾಕಲು ಶ್ರಮಿಸಲಾಗುತ್ತಿದೆ. ಆಕಾಂಕ್ಷಿಗಳು ಯಾರೇ ಆಯ್ಕೆಯಾದರು ಅವರ ಪರ ಪ್ರತಿಯೊಬ್ಬ ಮುಖಂಡ ಹಾಗೂ ಕಾರ್ಯಕರ್ತರು ಒಮ್ಮತದಿಂದ ಕೆಲಸ ಮಾಡುವ ಮನಸ್ಥಿತಿ ಹೊಂದಲಾಗಿದೆ. ಕುಮಾರಸ್ವಾಮಿ ಅವರ ಮಹತ್ವಾಕಾಂಕ್ಷೆಯ ಪಂಚರತ್ನ ರಥವನ್ನು ಕೊಡಗಿನ ಪ್ರತಿ ಗ್ರಾಪಂ ಗಳಿಗೆ ಕೊಂಡೊಯ್ದು ಜೆಡಿಎಸ್ ಪಕ್ಷದ ಸಾಧನೆಗಳು, ಮುಂಬರುವ ಚುನಾವಣಾ ಪ್ರಣಾಳಿಕೆ ಬಗ್ಗೆ ಜನರ ಗಮನ ಸೆಳೆಯಲಾಗುವುದು ಎಂದರು.
ಕೊಡಗು ಜಿಜೆಪಿ ಭದ್ರಕೋಟೆ ಎನ್ನುವ ಶಾಸಕದ್ವರ ಸಾಧನೆ ಏನೇನೂ ಇಲ್ಲ. ಈ ಬಾರಿ ಕವಡೆ ಕಾಸಿನಷ್ಟು ಕೂಡಮಳೆಹಾನಿ ಪರಿಹಾರ ಒದಗಿಸಿಲ್ಲ. ಕೊಡಗಿನ ರಸ್ತೆಗಳ ಅಭಿವೃದ್ದಿಗೆ ಅಗತ್ಯ ಅನುದಾನ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾದರೆ ಪ್ರತಿ ಗ್ರಾಪಂ ಮಟ್ಟದಲ್ಲಿ ಸುಸಜ್ಜಿತ ಹೈಫೈ ಆಸ್ಪತ್ರೆ, ಕಾನ್ವೆಂಟ್ ಸೇರಿದಂತೆ ಸಾಲಮನ್ನಾ, ಕಾಡಾನೆ ಹಾವಳಿಗೆ ಪರಿಹಾರ ಲಭಿಸಲಿದೆ ಎಂದರು.
ಇದೇ ಸಂದರ್ಭ ಕೊಡಗು ಯುವ ಜೆಡಿಎಸ್ ಉಪಾಧ್ಯಕ್ಷರಾಗಿ ಎಚ್.ಸಿ.ಮೂರ್ತಿ, ಕಾರ್ಯದರ್ಶಿಯಾಗಿ ಮಹದೇವ್, ಸಂಘಟನಾ ಕಾರ್ಯದರ್ಶಿಯಾಗಿ ತ್ರಿನೇಶ್, ಸಿ.ಎಂ.ಶಶಿಧರ್, ಖಜಾಂಚಿಯಾಗಿ ತೌಫೀಕ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷರಾಗಿ ರಾಜು, ನಗರ ಘಟಕ ಅಧ್ಯಕ್ಷರಾಗಿ ವಿನಯ್, ಉಪಾಧ್ಯಕ್ಷರಾಗಿ ವಿನ್ಸೆಂಟ್, ಕಾರ್ಯದರ್ಶಿಯಾಗಿ ಮಹಮ್ಮದ್ ರಿಯಾಜ್, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ರೆಹಮತ್ ಅವರಿಗಳನ್ನು ನೇಮಿಸಲಾಯಿತು.
ಸಭೆಯಲ್ಲಿ ಪಕ್ಷದ ಮುಖಂಡ ನಾಪಂಡ ಮುತ್ತಪ್ಪ, ಪಿ.ಡಿ.ರವಿ, ಎಚ್.ಡಿ.ಚಂದ್ರು, ಶರತ್ ಮತ್ತಿತರರು ಇದ್ದರು.
Back to top button
error: Content is protected !!