ಕಾರ್ಯಕ್ರಮ

ಕನ್ನಿಕಾ ಶುದ್ದ ಕುಡಿವ ನೀರಿನ‌ ಘಟಕ ಉದ್ಘಾಟಿಸಿದ ಶಾಸಕ‌ ಅಪ್ಪಚ್ಚುರಂಜನ್

ಕುಶಾಲನಗರ, ಸೆ 24: ಕುಶಾಲನಗರದ ಕನ್ನಿಕಾ ವಿವಿದೋದ್ದೇಶ ಸಹಕಾರ ಸಂಘದಿಂದ ಕುಶಾಲನಗರ ಸ.ಪ.ಪೂ.ಕಾಲೇಜಿಗೆ ಕೊಡುಗೆ ನೀಡಿರುವ ಶುದ್ದ ಕುಡಿವ ನೀರಿನ ಘಟಕವನ್ನು ಶಾಸಕ ಅಪ್ಪಚ್ಚುರಂಜನ್ ಉದ್ಘಾಟಿಸಿದರು.
ರೂ 1.50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕನ್ನಿಕಾ ಘಟಕ ಉದ್ಘಾಟಿಸಿದ ‌ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಯಿಂದ ರೂ 2 ಲಕ್ಷ ವೆಚ್ಚದಲ್ಲಿ ಒದಗಿಸಿರುವ ಕಂಪ್ಯೂಟರ್ ಲ್ಯಾಬ್ ಮತ್ತು ಸೈನ್ಸ್ ಲ್ಯಾಬ್ ಗೆ ಶಾಸಕರು ಚಾಲನೆ‌ ನೀಡಿದರು.
ಬಳಿಕ‌ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್, ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಈ ಸಂಯುಕ್ತ ಪಪೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸರಕಾರಿ ಕಾಲೇಜು ಹೆಮ್ಮರವಾಗಿ‌ ಬೆಳೆದಿದೆ. ಖಾಸಗಿ ಕಾಲೇಜುಗಳಿಗೆ ಕಡಿಮೆಯಿಲ್ಲದಂತೆ ಸೌಲಭ್ಯಗಳು ಈ ಸಂಸ್ಥೆ ಒಳಗೊಂಡಿದೆ ಎಂದರು.
ಇತ್ತೀಚೆಗೆ ರೂ 97 ಲಕ್ಷದಲ್ಲಿ ಹೆಚ್ಚುವರಿ ಕಟ್ಟಡ ಒದಗಿಸಲಾಗಿದೆ. ಇತ್ತೀಚೆಗೆ ಹೊಸದಾಗಿ ಘೋಷಣೆಯಾದ ವಿವಿಗಳಿಗೆ ಪ್ರಾರಂಭಿಕವಾಗು ರೂ 2 ಕೋಟಿ ರೂ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಈ ಸಂದರ್ಭ ಕುಶಾಲನಗರ ಪಪಂ ಅಧ್ಯಕ್ಷ ಬಿ.ಜೈವರ್ಧನ್,
ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್, ಸಿಇಒ ಶಕುಂತಲಾ, ನಿರ್ದೇಶಕರಾದ ಸಂಜಯ್, ಮಂಜುನಾಥ್, ಶಾಂತಲಕ್ಷ್ಮಿ, ಸುನಿತಾ, ವೈಶಾಖ್, ಆರ್ಯವೈಶ್ಯ ಮಹಾಸಭಾ ರಾಜ್ಯ ನಿರ್ದೇಶಕ ಬಿ.ಆರ್.ನಾಗೇಂದ್ರಪ್ರಸಾದ್, ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮಿ ಶ್ರೀನಿವಾಸ್, ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಪ್ರಾಂಶುಪಾಲ ಸತೀಶ್ ಬಾಬು, ಉಪನ್ಯಾಸಕರಾದ ಫಿಲಿಪ್ ವಾಸ್, ನಾಗೇಶ್, ಮೋಹನ್, ಶಿಕ್ಷಕ ಎ.ಸಿ.ಮಂಜುನಾಥ್ ಮತ್ತಿತರರು ಇದ್ದರು.
ಇದೇ ಸಂದರ್ಭ ರಾಜ್ಯ, ಜಿಲ್ಲಾ ಮಟ್ಟದ ಪ್ರಶಸ್ತಿ ವಿಜೇತ ಶಾಲಾ ಶಿಕ್ಷಕರಾದ ಡಾ.ಸದಾಶಿವಯ್ಯ ಎಸ್.ಪಲ್ಲೇದ್, ಉ.ರಾ.ನಾಗೇಶ್, ಗುರುಸ್ವಾಮಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!