ಕುಶಾಲನಗರ, ಸೆ 19: ಕುಶಾಲನಗರ ಸಮೀಪದ ಬಸವನಹಳ್ಳಿಯಲ್ಲಿರುವ ಸೋಮವಾರಪೇಟೆ ತಾಲ್ಲೂಕು ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘದ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು ಅಧ್ಯಕ್ಷತೆಯಲ್ಲಿ ಕುಶಾಲನಗರ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಮರದ ಪಾಚಿ ಸಂಗ್ರಹಣೆಯು ಕಷ್ಟಕರವಾಗಿರುವುದರಿಂದ ಪ್ರತಿ ಕೆಜಿಗೆ ರೂ.350 ನಿಗದಿ ಪಡಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಕೊಡ್ಲಿಪೇಟೆ, ಶನಿವಾರಸಂತೆ ಭಾಗದಿಂದಲೂ ಪಾಚಿ,ಸೀಗೆ,ಅಂಟುವಾಳಗಳನ್ನು ಸಂಗ್ರಹಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಲಹೆ ನೀಡಿದರು.
ಸಂಘದಲ್ಲಿ ಸದಸ್ಯತ್ವ ಪಡೆದಿರುವ ಸದಸ್ಯರು ಸಂಘದೊಂದಿಗೆ ಕನಿಷ್ಠ 2 ಆರ್ಥಿಕ ವರ್ಷ ರೂ.6 ಸಾವಿರಗಳ ಯಾವುದಾದರೂ ವ್ಯವಹಾರ ಮಾಡುತ್ತಾ ಇರಬೇಕು.ಇಲ್ಲದಿದ್ದಲ್ಲಿ ಹೊಸ ತಿದ್ದುಪಡಿ ಕಾಯಿದೆ ಕಾನೂನು ಪ್ರಕಾರ ಅಂತಹವರು ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸ್ಪರ್ಧಿಸುವ ಹಾಗೂ ಮತದಾನ ಮಾಡುವ ಹಕ್ಕನ್ನು ಕಳೆದುಕೊಳ್ಳುತ್ತಾರೆ ಎಂದು ಅಧ್ಯಕ್ಷರು ತಿಳಿಸಿದರು.
ಕಳೆದ ಸಾಲಿನಲ್ಲಿ ರಾಜಾರಾವ್ ಅವಧಿಯಲ್ಲಿ ಸಹಕಾರ ಇಲಾಖೆ ಅನುಮೋದನೆ ಪಡೆಯದೆ ಕಚೇರಿ ಮೇಲ್ಭಾಗದಲ್ಲಿ ಕಬ್ಬಿಣದ ಶೀಟುಗಳನ್ನು ಅಳವಡಿಸಲಾಗಿದ್ದು,ಈ ಕಾಮಗಾರಿಯ ವೆಚ್ಚ ರೂ.3.5 ಲಕ್ಷ ಹಣವನ್ನು ರಾಜಾರಾವ್ ಅವರಿಗೆ ಮರಳಿ ನೀಡುವ ವಿಚಾರ ಕುರಿತು ತೀವ್ರ ಚರ್ಚೆ ನಡೆಯಿತು. ಈ ಕುರಿತು ಇಲಾಖಾಧಿಕಾರಿಗಳಿಗೆ ಪತ್ರ ಬರೆದು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷ ಚಂದ್ರು ಅವರ ವಿವೇಚನಗೆ ಬಿಡಲು ಸದಸ್ಯರು ಸಮ್ಮತಿ ಸೂಚಿಸಿದರು.
ಸಂಘದಲ್ಲಿ ಸದಸ್ಯರ ಅನುಕೂಲಕ್ಕಾಗಿ ಮರಣ ನಿಧಿ ಸ್ಥಾಪಿಸಲು ತೀರ್ಮಾನಿಸಲಾಯಿತು.
2021-22ನೇ ಸಾಲಿನ ಆಡಳಿತ ಮಂಡಳಿ ವರದಿ,ಲೆಕ್ಕಪರಿಶೋಧನಾ ವರದಿಯನ್ನು ಸಿಓ ಹನಿಕುಮಾರ್ ಸಭೆಗೆ ಮಂಡಿಸಿದರು.2022-23ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಮಂಡಿಸಿ ಅಂಗೀಕಾರ ಪಡೆಯಲಾಯಿತು.
ಸಂಘದ ಉಪಾಧ್ಯಕ್ಷ ಬಿ.ಎನ್.ಮನು,ನಿರ್ದೇಶಕರಾದ ಎಸ್.ಎನ್.ರಾಜಾರಾವ್, ಸಿ.ಕೆ.ಉದಯಕುಮಾರ್, ಬಿ.ಎಂ.ಯಶೋಧ,ಬಿ.ಆರ್.ಸುರೇಶ್,ಅಣ್ಣಯ್ಯ, ಎಸ್.ಆರ್.ಕಮಲ,ಕಾವೇರಿ,ಬಿ.ಬಿ.ಮಹೇಶ್,ವಲಯ ಅರಣ್ಯಾಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು,ಕ.ರಾ.ಲ್ಯಾಂಪ್ಸ್ ಮಹಾಮಂಡಳಿ ನಿಯಮಿತ ಪ್ರತಿನಿಧಿ ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಜಿ.ಹನಿಕುಮಾರ್ ಉಪಸ್ಥಿತರಿದ್ದರು. ಮೊದಲಿಗೆ ಮೃತಪಟ್ಟ ಸದಸ್ಯರಿಗೆ ಮೌನಾಚರಣೆ ಮಾಡಲಾಯಿತು.
Back to top button
error: Content is protected !!