ಅವ್ಯವಸ್ಥೆ

ಸ್ಥಳೀಯರಿಗೆ ಅನಾನುಕೂಲ: ರೈತ ಸಂಘದ ಆರೋಪ

ಕುಶಾಲನಗರ, ನ 17: ತಾಲೂಕಿನ ಕಣಿವೆ ಸಮೀಪ ಇರುವ ಭುವನ ಗಿರಿಯ ತ್ಯಾಜ್ಯ ಸಂಗ್ರಹ ಘಟಕವನ್ನು ಸ್ಥಳಾಂತರ ಮಾಡುವಂತೆ , ಕುಶಾಲನಗರ ಪುರಸಭೆಯ ಮುಖ್ಯ ಕಾರ್ಯನಿರ್ವಕ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಸಂಚಾಲಕ ಡಾ ಅರುಣ್ ಕುಮಾರ್ ಆಗ್ರಹಿಸಿದ್ದಾರೆ.

ಘಟಕದಿಂದ
ಭುವನಗಿರಿಯ ರೈತರಿಗೆ, ಕಾರ್ಮಿಕ ವರ್ಗದವರಿಗೆ ಅನಾನುಕೂಲ ಉಂಟಾಗುತ್ತಿದ್ದು ಗಬ್ಬು ವಾಸನೆಯಿಂದ ಜೀವನ ದುಸ್ಥರವಾಗಿದೆ. ರೋಗ ರುಜಿನಗಳು‌ ಕಾಡುತ್ತಿವೆ ಎಂದು ಗ್ರಾಮಸ್ಥರ ಅಳಲು ವ್ಯಕ್ತಪಡಿಸಿದ್ದಾರೆ.ಪಕ್ಕದಲ್ಲಿ ಹಾರಂಗಿ ಕಾಲುವೆ ಇದೆ ಅದು ಎಲ್ಲಾ ಭಾಗದ ರೈತರಿಗೆ ಉಪಯೋಗಿಸುವ ಕಾಲುವೆಯಾಗಿದೆ. ಅದಕ್ಕೆ ಈ ತ್ಯಾಜ್ಯ ವಸ್ತುಗಳು ಬೀಳುತ್ತಿವೆ. ರಸ್ತೆಯಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ . ಕೂಡಲೇ ಸ್ಥಳಾಂತರ ಮಾಡಬೇಕು ಇಲ್ಲವಾದಲ್ಲಿ ಪುರಸಭೆಯ ಎದುರು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಭುವನಗಿರಿಯ ಗ್ರಾಮಸ್ಥರು ಸೇರಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅರುಣ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!