ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದ ಮಾಚೆಟ್ಟಿರ ಪೂವಮ್ಮಗೆ ಶಾಸಕ ಡಾ.ಮಂತರ್ ಗೌಡ ಸನ್ಮಾನ

ಜನಪರ ಬದ್ಧತೆ, ಕಾಳಜಿ ಮತ್ತು ಜನಸೇವೆಯೇ ರಾಜಕೀಯದ ಮೂಲ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾದ ಶಾಸಕ ಡಾ. ಮಂತರ್ ಗೌಡ!
ನಿನ್ನೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ವಿವಿಧೆಡೆಗಳಲ್ಲಿ ಸಂಜೆಯವರೆಗೂ ಹಲವು ಕಾರ್ಯಕ್ರಮಗಳು ಹಾಗೂ ಸಭೆಗಳಲ್ಲಿ ಭಾಗವಹಿಸಿದ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು, ರಾತ್ರಿ ವಿಶ್ರಾಂತಿಗೂ ತೆರಳದೆ ಮಂಗಳೂರಿಗೆ ಪ್ರಯಾಣ ಬೆಳೆಸಿದರು.
ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದು ದೇಶದ ಕೀರ್ತಿ ಹೆಚ್ಚಿಸಿದ ಕೊಡಗಿನ ಹೆಮ್ಮೆಯ ಕನ್ನಡತಿ, ಅಂತರರಾಷ್ಟ್ರೀಯ ಕ್ರೀಡಾಪಟು ಮಾಚೆಟ್ಟಿರ ಪೂವಮ್ಮ ಅವರ ಮಂಗಳೂರಿನ ನಿವಾಸಕ್ಕೆ ಭೇಟಿ ನೀಡಿದ ಶಾಸಕರು, ಅವರ ಐತಿಹಾಸಿಕ ಸಾಧನೆಯನ್ನು ಅಭಿನಂದಿಸಿ ಗೌರವಿಸಿ ಸನ್ಮಾನಿಸಿದರು.
ಸಾಧಕರನ್ನು ಗುರುತಿಸಿ ಗೌರವಿಸುವುದು, ಅವರ ಸಾಧನೆಗೆ ಬೆನ್ನೆಲುಬಾಗಿ ನಿಲ್ಲುವುದು ಹಾಗೂ ಜನರೊಂದಿಗೆ ಆತ್ಮೀಯ ಸಂಬಂಧವನ್ನು ಬೆಸೆಯುವುದೇ ನಿಜವಾದ ಜನಸೇವೆ ಎಂಬುದನ್ನು ಡಾ. ಮಂತರ್ ಗೌಡ ಅವರು ತಮ್ಮ ನಡೆ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಜನರಿಗಾಗಿ ನಿರಂತರ ಶ್ರಮ, ಸಾಧಕರಿಗೆ ಪ್ರೋತ್ಸಾಹ, ಜನಸೇವೆಯೇ ರಾಜಕೀಯದ ಧ್ಯೇಯ — ಇದೇ ಡಾ. ಮಂತರ್ ಗೌಡ ಅವರ ಜನಪರ ಬದ್ಧತೆ!



