ಕುಶಾಲನಗರ, ಆ 11: ಕೇಂದ್ರ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಅರಣ್ಯ ಹಕ್ಕು ಪತ್ರ ಪಡೆದ ಫಲಾನುಭವಿಗಳು ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಜಾಗೃತಿ ಮೂಡಿಸಲಾಯಿತು. ಹಾಡಗೆ ಭೇಟಿ ನೀಡಿದ
ಪೊನ್ನಂಪೇಟೆ ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಸಂದೀಪ್ ಅವರು ಹಾಡಿ ಪ್ರಮುಖರಿಗೆ ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಅಗತ್ಯ ದಾಖಲಾತಿಗಳನ್ನು ಒದಗಿಸುವ ಮೂಲಕ ಅಗತ್ಯ ಸೌಕರ್ಯಗಳನ್ನು ಪಡೆದುಕೊಳ್ಳಲು ಹಾಡಿ ನಿವಾಸಿಗಳು ಸೂಚಿಸಿದರು.
ಈ ಸಂದರ್ಭ ದಿಶಾ ಸಮಿತಿ ಸದಸ್ಯ ಆರ್.ಕೆ.ಚಂದ್ರ, ಶಾಲಾ ಶಿಕ್ಷಕ ವೆಂಕಟ ಮೂರ್ತಿ ಮತ್ತಿತರರು ಇದ್ದರು.
Back to top button
error: Content is protected !!