ಸಭೆ

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪೂರ್ವಭಾವಿ ಸಭೆ

ಕುಶಾಲನಗರ, ಆ 07: 80ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಡೆಯುವ ಕಾರ್ಯಕ್ರಮದ ರೂಪರೇಷೆಗಳನ್ನು ನಿಗದಿಪಡಿಸುವ ಪೂರ್ವಭಾವಿ ಸಭೆ ನಡೆಯಿತು.
ಕುಶಾಲನಗರ ತಾಲೂಕು ಹೆಚ್ಚುವರಿ ದಂಡಾಧಿಕಾರಿಗಳೂ, ತಹಸಿಲ್ದಾರ್ ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪುರಸಭೆ ಮುಖ್ಯ ಅಧಿಕಾರಿ ಗಿರೀಶ್, ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಣ್ಣ, ಅವರ ಸಮಕ್ಷಮದಲ್ಲಿ ಆಗಸ್ಟ್ 15ರಂದು ಸಾರ್ವಜನಿಕವಾಗಿ ಆಯೋಜನೆ ಮಾಡಿ ಅದರಲ್ಲಿ ಸ್ಥಳೀಯ ಶಾಲಾ-ಕಾಲೇಜುಗಳ, ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅಂದು ಬೆಳಿಗ್ಗೆ 9:30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ತಾಲೂಕ ದಂಡಾಧಿಕಾರಿ ಕೃಷ್ಣಮೂರ್ತಿ ಸಭೆಯಲ್ಲಿ ನಗರದಲ್ಲಿನ ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿ, ಅಂದಿನ ಸಭೆಗೆ ಪೂರ್ವಭಾವಿಯಾಗಿ ಯಾವ ರೀತಿಯಲ್ಲಿ ಆಯೋಜನೆ ಆಗಬೇಕು ಎಂಬುದನ್ನು ತಿಳಿಸಿದರು.
ಶಿಕ್ಷಣ ಇಲಾಖೆಯ ಪರವಾಗಿ ನವೀನ್, ಚಂದ್ರವತಿ, ಉತ್ತಪ್ಪ, ಅಗ್ನಿಶಾಮಕದಳದ ರಂಜಿತ್, ಪುರಸಭೆ ಆರೋಗ್ಯ ಅಧಿಕಾರಿ ಉದಯಕುಮಾರ್, ಆರೋಗ್ಯ ಇಲಾಖೆ ಅಧಿಕಾರಿಗಳು, ನಾಗರಿಕ ಆಹಾರ ಪೂರೈಕೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೂಡಿಗೆ ಡೈರಿ ಅಧಿಕಾರಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸೆಲಿನಾ ಪೇದ್ರು, ಫಿಲೋಮಿನಾ, ಕೆ. ಎನ್. ಅಶೋಕ್, ಮೊಯಿದ್ದೀನ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಮೋಹನ್, ಪತ್ರಕರ್ತ ಸಬಲಂ ಭೋಜಣ್ಣ ರೆಡ್ಡಿ, ಎಚ್ಎಮ್ ರಘು, ಮೊದಲಾದವರು ಈ ಸಭೆಯಲ್ಲಿದ್ದು ಸ್ವಾತಂತ್ರ್ಯ ದಿನೋತ್ಸವದ ಧ್ವಜಾರೋಹಣ, ಪಥ ಸಂಚಲನ, ಮತ್ತು ರಾಷ್ಟ್ರಗೀತೆ, ದೇಶಭಕ್ತಿ ಗೀತೆ, ವಂದೇ ಮಾತರಂ, ಹಾಗೂ ನಾಡಗೀತೆಗಳ ಪಟ್ಟಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವ ಕುರಿತಂತೆ, ವೇದಿಕೆ ನಿರ್ಮಾಣ ಮತ್ತಿತರ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡುವುದು, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಲ್ಲಿ, ಕೇವಲ ನಾಮಕಾವಸ್ತೆಗೆ ಅಧಿಕಾರಿಗಳನ್ನು ಪರಿಗಣಿಸುವುದರ ಪ್ರಮೇಯ ಎಷ್ಟು ಸರಿ ಎಂಬ ಚರ್ಚೆಯ ನಂತರ ಸಾರ್ವಜನಿಕ ಸಂಘ ಸಂಸ್ಥೆಗಳನ್ನು ಒಳಗು ಮಾಡಿಕೊಂಡು ಕಾರ್ಯಕ್ರಮ ರೂಪಿಸಿಕೊಳ್ಳಲು ಸಲಹೆ ನೀಡಲಾಯಿತು. ಜೊತೆಗೆ ಸ್ಥಳೀಯ ಮಾಜಿ ಸೈನಿಕರ ಸಂಘವನ್ನು ವಿಶೇಷ ಆಹ್ವಾನ ನೀಡಿ ಸಭೆಗೆ ಕರೆಯಲು ತೀರ್ಮಾನಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!