ಮಳೆ
ಆಗಸ್ಟ್ ಬಂದರೂ ತುಂಬದ ಚಿಕ್ಲಿಹೊಳೆ

ಕುಶಾಲನಗರ, ಆ 01 ಕೊಡಗಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾದ ಚಿಕ್ಲಿಹೊಳೆ ಅಣೆಕಟ್ಟೆ ಜುಲೈ ತಿಂಗಳು ಕಳೆದರೂ ಕೂಡ ಭರ್ತಿಯಾಗಿಲ್ಲ.
ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಪುಟ್ಟ ಅಣೆಕಟ್ಟೆಯಾದರೂ ಕೂಡ ಮಳೆಯ ಕೊರತೆ ಹಿನ್ನೆಲೆಯಲ್ಲಿ ಚಿಕ್ಲಿಹೊಳೆ ಇನ್ನೂ ಭರ್ತಿಯಾಗಿಲ್ಲ.
ಈಗಾಗಲೆ ಹಾರಂಗಿ ಭರ್ತಿಯಾಗಿದ್ದು ಕ್ರಸ್ಟ್ ಗೇಟ್ ಗಳ ಮೂಲಕ ಹರಿಬೊಡುವ ನೀರಿನ ಸೊಬಗು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ರತಿ ವರ್ಷ ಹಾರಂಗಿ, ದುಬಾರೆ, ಕಾವೇರಿ ನಿಸರ್ಗಧಾಮದ ಜೊತೆಗೆ ಚಿಕ್ಲಿಹೊಳೆ ಕೂಡ ಕುಶಾಲನಗರ ತಾಲೂಕಿನಲ್ಲಿ ಪ್ರವಾಸಿಗರ ಪ್ರಮುಖ ವಿಸಿಟಿಂಗ್ ತಾಣಗಳಾಗಿದ್ದವು. ಆದರೆ ಈ ವರ್ಷ ಮಳೆಯ ಅಭಾವದಿಂದ ಚಿಕ್ಲಿಹೊಳೆ ಭರ್ತಿಯಾಗದೆ ಪ್ರವಾಸಿಗರಿಗೆ ನಿರಾಸೆ ಎದುರಾಗಿದೆ.



