ಕುಶಾಲನಗರ, ಆ 22: ಯುವಜನಾಂಗವು ಸ್ವಂತಿಕೆಯೊಂದಿಗೆ ಸ್ಪಷ್ಟಗುರಿ ಹಾಗೂ ಸ್ಪಷ್ಟ ಅರಿವು ಹೊಂದುವ ಮೂಲಕ ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜೆ.ಸಿ.ಐ.ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಅನ್ಸು ಸರಫ್ ಹೇಳಿದರು.
ಕೊಡಗಿನ ಸುಂಟಿಕೊಪ್ಪ
ಜೆ.ಸಿ.ಐ.ಸಂಸ್ಥೆಯ ವತಿಯಿಂದ
ಕುಶಾಲನಗರ ಪಟ್ಟಣದ ಕನ್ನಿಕಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಸಂಘಟಿಸಿದ್ದ ಜೆ.ಸಿ.ಐ.ಸಂಸ್ಥೆಯ ವಲಯ -14 ರ ಬೆಳವಣಿಗೆ ಮತ್ತು ಅಭಿವೃದ್ಧಿ ಕುರಿತು ಜೆಸಿಐ ಸದಸ್ಯರಿಗೆ ಏರ್ಪಡಿಸಿದ್ದ ‘ಘರ್ಜನೆ’ ಜೆಸಿಐ ಸಮ್ಮೇಳದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವಕರು ದೇಶದ ಪ್ರಗತಿಗೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಜೆಸಿಐ ವಲಯ – 14 ರ ವಲಯ ಅಧ್ಯಕ್ಷ ಕುನಾಲ್ ಮನಕ್ ಚಂದ್ ,ಯುವ ಸಮುದಾಯ ಉತ್ತಮ ಕೌಶಲಗಳನ್ನು ಬೆಳೆಸಿಕೊಂಡು ತಮ್ಮ ಬದುಕಿನೊಂದಿಗೆ ಸಮಾಜದ ಪ್ರಗತಿಗೆ ಶ್ರಮಿಸಬೇಕು ಎಂದರು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ವತಿಯಿಂದ ಕೈಗೊಂಡಿರುವ ವಿವಿಧ ಸಾಮಾಜಿಕ ಕಾರ್ಯಗಳ ಬಗ್ಗೆ ಶ್ಲಾಘಿಸಿದರು.
ಸಮಾಜ ಸೇವಕ ಡಾ
ಮಂತರ್ ಗೌಡ ಮಾತನಾಡಿ, ಜೆಸಿಐ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಯುವಜನಾಂಗಕ್ಕೆ ಉತ್ತಮ ನಾಯಕತ್ವ ಹಾಗೂ ಕೌಶಲ್ಯ ತರಬೇತಿಯನ್ನು ನೀಡುತ್ತಿರುವುದು
ಹೆಮ್ಮೆಯ ಸಂಗತಿ ಎಂದರು.
ಜೆಸಿಐ ಸಂಸ್ಥೆಯ ವಲಯದ ಎಸ್ ಎಂ.ಎ.ವಿಭಾಗದ ಅಧ್ಯಕ್ಷ ಕೆ.ಎಸ್.
ಕುಮಾರ್ ಮಾತನಾಡಿ,
ಜೆಸಿಐ ಸದಸ್ಯರು ಸಮಾಜಮುಖಿ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ
ಸಮ್ಮೇಳನದ ಅಧ್ಯಕ್ಷ ಕೆ. ಪ್ರವೀಣ್ ಮಾತನಾಡಿ, ಕೊಡಗಿನಲ್ಲಿ ಜೆಸಿಐ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳುತ್ತಿರುವ ಶೈಕ್ಷಣಿಕ, ಆರೋಗ್ಯ ಹಾಗೂ ಸಾಮಾಜಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.
ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಿ.ಕೆ. ಸತೀಶ್ ಕುಮಾರ್
ಸಮ್ಮೇಳನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೆಸಿಐ ಸಂಸ್ಥೆಯ ರಾಷ್ಟ್ರೀಯ
ಉಪಾಧ್ಯಕ್ಷ ವಿಕಾಸ್ ಗುಗ್ಲಿಯಾ, ಸಂಸ್ಥೆಯ ವಲಯದ ಉಪಾಧ್ಯಕ್ಷ ಮಾಯಾ ಗಿರೀಶ್, ನಿಕಟ ಪೂರ್ವ
ಉಪಾಧ್ಯಕ್ಷ ಭರತ್ ಎನ್.ಆಚಾರ್ಯ,ವಲಯ -15 ರ ಅಧ್ಯಕ್ಷ ರಾಯನ್ ಉದಯ್ ಕ್ರಾಸ್ತಾ, ಸಂಸ್ಥೆಯ ವಲಯ – 14 ರ ಪೂರ್ವ ಅಧ್ಯಕ್ಷರಾದ ದೇವಿಪ್ರಸಾದ್ ಕಾಯರ್ ಮಾರ್, ಮಧೂಶ್ ಪೂವಯ್ಯ, ನವೀನ್ ಲಾಡ್ ಮಿಕ್ಷಿತ್ , ಪಿ.ಟಿ.ಸೈಮನ್ ,
ಸಮ್ಮೇಳನದ ನಿರ್ದೇಶಕ ಡೆನಿಸ್ ಡಿ’ಸೋಜ, ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ಜೇಸೀಗಳಾದ ಜಾಯಿದ್ ಅಹ್ಮದ್ ಮತ್ತು ಜ್ಯೋತಿ ಹರೀಶ್ ನಿರ್ವಹಿಸಿದರು. ಫೆಲ್ಸಿ ಡಿ’ ಸೋಜ,ಪ್ರೀತಂ ಪ್ರಭಾಕರ್, ಎಚ್.ಆರ್.ನಿರಂಜನ್ ಅತಿಥಿ ಪರಿಚಯ ಮಾಡಿದರು.
ಸಮ್ಮೇಳನದಲ್ಲಿ ಕೊಡಗಿನಲ್ಲಿ ಜೆಸಿಐ ಸಂಸ್ಥೆಯ ವಿವಿಧ ಘಟಕಗಳು ಸೇರಿದಂತೆ 11 ಜಿಲ್ಲೆಗಳಿಂದ ಜೆಸಿಐ ಪ್ರತಿನಿಧಿಗಳು ಭಾಗವಹಿಸಿದ್ದರು.
ಸಮ್ಮೇಳನದ ಅಂಗವಾಗಿ ಟಿಬೇಟಿಯನ್ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
Back to top button
error: Content is protected !!