ಹುಣಸೂರು: ಆ.23 ರಿಂದ ಮಡಿಕೇರಿಗೆ ಸೌಹಾರ್ದ ನಡಿಗೆ ಆರಂಭ
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ
ಕುಶಾಲನಗರ, ಆ 22: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ನೇತೃತ್ವದಲ್ಲಿ ಸೌಹಾರ್ದ ಪಾದಯಾತ್ರೆ*
*ಜನಕಲ್ಯಾಣದ ನಾಯಕರಾದ ಸಿದ್ದರಾಮಯ್ಯರವರ ನಿಲುವನ್ನು ಬೆಂಬಲಿಸಿ ಸೌಹಾರ್ದತೆ ಉಳಿಯಲಿ ಕೋಮುವಾದ ಅಳಿಯಲಿ ಕರ್ನಾಟಕ ಬೆಳಗಲಿ ಎಂಬ ಆಶಯದೊಂದಿಗೆ ದಿನಾಂಕ 23.8.2022 ರಂದು ಬೆಳಗ್ಗೆ 9 ಗಂಟೆಗೆ ಹುಣಸೂರು ತಾಲೂಕಿನ ಅರಸು ಕಲ್ಲಹಳ್ಳಿ ಯಿಂದ *ಸಾಮರಸ್ಯಕ್ಕಾಗಿ ಸೌಹಾರ್ದ ನಡಿಗೆ* ಹಮ್ಮಿಕೊಂಡಿದ್ದು *ಅಂದು ರಾತ್ರಿ ಪಿರಿಯಾಪಟ್ಟಣದಲ್ಲಿ ವಾಸ್ತವ್ಯ ಹೂಡಿ ದಿನಾಂಕ 24 ರಂದು ಕುಶಾಲನಗರಕ್ಕೆ ತೆರಳಿ ಅಲ್ಲಿ ವಾಸ್ತವ್ಯ ಹೂಡಿ ದಿನಾಂಕ 25 ರಂದು ಮಡಿಕೇರಿಗೆ ತೆರಳಿ ಅಲ್ಲಿ ವಾಸ್ತವ್ಯ ಹೂಡಲಾಗುವುದು*.
ಕರ್ನಾಟಕದಲ್ಲಿ ಇತ್ತೀಚಿನ ನಡೆಯುತ್ತಿರುವ ಬೆಳವಣಿಗೆಗಳು ಆತಂಕಕಾರಿಯಾಗಿದೆ. ಜಾತ್ಯತೀತತೆಯ ಮೇಲೆ ನಂಬಿಕೆ ಇಟ್ಟಿರುವ ನಾವು ಸೌಹಾರ್ದತೆಯಿಂದ ಕೂಡಿ ಬಾಳುವ ವಾತಾವರಣ ನಿರ್ಮಾಣ ಮಾಡಬೇಕಿದೆ ಎಂಬುದು ನಡಿಗೆಯ ಉದ್ದೇಶ.
*ಈ ಸೌಹಾರ್ದ ನಡಿಗೆಯಲ್ಲಿ ನಾಡಿನ ಹಿರಿಯ ಹೋರಾಟಗಾರರಾದ ಪ ಮಲ್ಲೇಶ್, ಪ್ರೊ ಮಹೇಶ್ಚಂದ್ರ ಗುರು, ಪ್ರೊ ಕೆಎಸ್ ಭಗವಾನ್, ಸಾಹಿತಿಗಳಾದ ಬಂಜಗೆರೆ ಜಯಪ್ರಕಾಶ್,ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಎಚ್ ಪಿ ಮಂಜುನಾಥ್, ಡಾ.ಡಿ ತಿಮ್ಮಯ್ಯ, ರಾಜ್ಯ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಡಾ ಪುಷ್ಪಅಮರ್ ನಾಥ್, ಹಿಂದುಳಿದ ವರ್ಗಗಳ ವೇದಿಕೆಯ ರಾಜ್ಯಾಧ್ಯಕ್ಷ ಕೆ ಎಸ್ ಶಿವರಾಮ್, ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಡಿ ನಾಗಭೂಷಣ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಯೋಗೇಶ್, ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ನಾಗೇಶ್, ಹುಣಸೂರಿನ ಉದ್ಯಮಿ ಎಚ್ ಪಿ ಅಮರ್ ನಾಥ್ ಸೇರಿದಂತೆ ಸಿದ್ದರಾಮಯ್ಯ ನವರ ಅಭಿಮಾನಿಗಳು ಹಿತೈಷಿಗಳು ಇತರೆ ಗಣ್ಯರು ಭಾಗವಹಿಸಲಿದ್ದಾರೆ*
*ಈ ವಿಶೇಷ ಪಾದಯಾತ್ರೆಯಲ್ಲಿ ಹುಣಸೂರು ತಾಲೂಕಿನ ಎಲ್ಲಾ ಸಿದ್ದರಾಮಯ್ಯನವರ ಹಾಗೂ ಎಚ್ ಪಿ ಮಂಜುನಾಥ್‍ರವರ ಅಭಿಮಾನಿಗಳು, ಹಿತೈಷಿಗಳು ಈ ಪಾದಯಾತ್ರೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸ ಬೇಕಾಗಿ ರಾಜ್ಯ ಹಿಂದುಳಿದ ವೇದಿಕೆ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ ವಿನಂತಿಸಿದೆ.