ಕೊಡಗಿನಲ್ಲಿ ಸಿದ್ಧರಾಮಯ್ಯಗೆ ಕಪ್ಪು ಬಾವುಟದ ಸ್ವಾಗತ ಸಿದ್ಧರಾಮಯ್ಯ ಕಾರೊಳಗೆ ಸಾವರ್ಕರ್ ಭಾವಚಿತ್ರ ಎಸೆದ ಬಿ.ಜೆ.ಪಿ. ಯುವ ಮೋರ್ಚ ಕಾರ್ಯಕರ್ತರು.
ಒಂದು ದಿನದ ಕೊಡಗು ಜಿಲ್ಲಾ ಪ್ರವಾಸಕ್ಕಾಗಿ ಕೊಡಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೆ ಕೊಡಗಿನ ಗಡಿ ಭಾಗದ ತಿತಿಮತಿಯಲ್ಲಿ ಭಾ.ಜ.ಪಾ. ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಫ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಯುವ ಮೋರ್ಛಾ ಕಾರ್ಯಕರ್ತರು ಸಾವರ್ಕರ್ ಭಾವಚಿತ್ರ ಕೈಗೆ ನೀಡಿದರಲ್ಲದೇ ಕಪ್ಫುಬಾವುಟ ಪ್ರದರ್ಶಿಸಿ ಗೋ ಬ್ಯಾಕ್ ಸಿದ್ಧರಾಮಯ್ಯ ಘೋಷಣೆ ಕೂಗಿದರು. ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದ್ದು ಜೊತೆಗೆ ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆಂದು ಬಿ.ಜೆ.ಪಿ. ಯುವ ಮೋರ್ಛ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.