ಕುಶಾಲನಗರ ನ 16: ಗೊಂದಿಬಸವನಹಳ್ಳಿ ಗ್ರಾಮದ ನಂ 38184ನೇ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಸಾಲಿನ ಅಧ್ಯಕ್ಷರಾಗಿ ಮಧುಕುಮಾರ್, ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು.
ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಇತ್ತೀಚಿಗೆ ನಡೆದ ಚುನಾವಣೆಯಲ್ಲಿ ಕೇವಲ 12 ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ 12 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದರು.
ಬುಧವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಮಧುಕುಮಾರ್, ಪ್ರಥಮ ಬಾರಿಗೆ ಸೋಮಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಉಪ ನಿಬಂಧಕರ ಕಛೇರಿಯ ಆಶಾ ಕಾರ್ಯ ನಿರ್ವಹಿಸಿದರು.
ಈ ಸಂದರ್ಭ ನಿರ್ದೇಶಕರಾದ ಶಿವಕುಮಾರ್, ದಿವಾಕರ, ಕಾಮಾಕ್ಷಿ, ಉಷಾ, ಪ್ರದೀಪ, ನವೀನ, ಲಕ್ಷ್ಮಣನಾಯಕ, ರಾಮೇಗೌಡ, ತಿಮ್ಮಪ್ಪ, ಡೇರಿ ಕಾರ್ಯದರ್ಶಿ ಶ್ರೀನಿವಾಸ ಇದ್ದರು.
Back to top button
error: Content is protected !!