ಕುಶಾಲನಗರ ,ಅ. 31 : ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ , ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯು ಕುಶಾಲನಗರ ಸುವರ್ಣ ಮಹೋತ್ಸವ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದು ನೂತನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 8 ಮಂದಿ ನಿರ್ದೇಶಕರಾಗಿ ಆಯ್ಕೆಗೊಂಡಿರುತ್ತಾರೆ.
ಕುಶಾಲನಗರ ವಿಭಾಗ, ಹೆಬ್ಬಾಲೆ ವಿಭಾಗ, ನಂಜರಾಯಪಟ್ಟಣ ವಿಭಾಗಗಳಲ್ಲಿ ಆಯ್ದ ಭಾಗಗಳ, ವಿಭಾಗಗಳಿಗೆ ಮೀಸಲಾತಿ, ಸೇರಿದಂತೆ ಸಾಮಾನ್ಯ ವಿಭಾಗ, ಮಹಿಳಾ ವಿಭಾಗ, ಪರಿಶಿಷ್ಟ ಜಾತಿ ಸೇರಿದಂತೆ 8 ಸ್ಥಾನಗಳಿಗೆ ಚುನಾವಣೆಯು ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಚುನಾವಣಾ ಪ್ರಕ್ರಿಯೆಯು ಮುಗಿದ ನಂತರ ಮತ ಎಣಿಕೆಯ ಕಾರ್ಯವು ಸಹಕಾರ ಸಂಘದ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿಯ ಸಮ್ಮುಖದಲ್ಲಿ ನಡೆಯಿತು. ಹೆಬ್ಬಾಲೆ ಸಾಮಾನ್ಯ ಕ್ಷೇತ್ರದಿಂದ ಬಿ.ಜೆ.ಪಿ. ಬೆಂಬಲಿತ ಅಭ್ಯರ್ಥಿಗಳಾದ ಹೆಚ್. ಬಿ. ಚಂದ್ರಪ್ಪ, ಹಿಂದುಳಿದ ವರ್ಗ ಪ್ರವರ್ಗ ‘ಎ” ಕ್ಷೇತ್ರದಿಂದ ಹೆಚ್. ಎನ್. ಮಹದೇವ, ಮಹಿಳಾ ಮೀಸಲು ಕ್ಷೇತ್ರದಿಂದ ಹೆಚ್.ಟಿ. ಚಂದ್ರಕಲಾ, ಅಯ್ಕೆಗೊಂಡರು.
ಕುಶಾಲನಗರ ಬ್ಲಾಕ್ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಬಿ .ಸಿ. ಮಲ್ಲಿಕಾರ್ಜುನ, ಬಿ.ಜೆ.ಪಿ. ಬೆಂಬಲಿತ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ , ನಂದಕುಮಾರ್, ಮಹಿಳಾ ಮೀಸಲು ಕ್ಷೇತ್ರದಿಂದ ಬೊಳ್ಳಚಂಡ ಪಾರ್ವತಿ ಮುತ್ತಣ್ಣ ಅಯ್ಕೆ ಗೊಂಡಿರುತ್ತಾರೆ.
ಕುಶಾಲನಗರ “ಎ” ತರಗತಿ ಬ್ಲಾಕ್ ನಿಂದ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳಾದ ಹೆಚ್.ಜೆ ಶರತ್, ನಂಜರಾಯಪಟ್ಟಣ “ಎ” ತರಗತಿ ಬ್ಲಾಕ್ ನಿಂದ ಕೆ.ಎಂ. ಪ್ರಸನ್ನ ನವರು ಅಯ್ಕೆಗೊಂಡಿರುತ್ತಾರೆ. ಎಂದು ಚುನಾವಣಾ ಅಧಿಕಾರಿ ಕುಶಾಲನಗರ ತಾಲ್ಲೂಕ ತಹಸೀಲ್ದಾರ್ ಕಿರಣ್ ಗೌರಯ್ಯ ತಿಳಿಸಿದ್ದಾರೆ.
ಚುನಾವಣಾ ಕಣದಲ್ಲಿ ಮೂರು ಕ್ಷೇತ್ರಗಳಿಂದ 20. ಮಂದಿ ಅಭ್ಯರ್ಥಿಗಳು ಸ್ಪರ್ಧೆ ಯಲ್ಲಿದ್ದರು.
ಒಟ್ಟು ಆಡಳಿತ ಮಂಡಳಿಯ ನಿರ್ದೇಶಕ ಸಂಖ್ಯೆ 12. ಇದರಲ್ಲಿ ಸುಂಟಿಕೊಪ್ಪ ಕ್ಷೇತ್ರದಿಂದ 4. ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ತಹಸೀಲ್ದಾರ್ ಕಿರಣ್ ಗೌರಯ್ಯ ಮಾಹಿತಿ ನೀಡಿರುತ್ತಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಸಂದೀಪ್, ಸಂಘದ ಕಾರ್ಯನಿರ್ವಾಹಣಾಧಿಕಾರಿ ಜಗದೀಶ್ ಕಾರ್ಯ ನಿರ್ವಹಿಸಿದರು.
Back to top button
error: Content is protected !!