ಆರೋಪ

ವರ್ಷ ಕಳೆದರೂ ಮುಗಿಯದ ಕಿರು ಸೇತುವೆ ಕಾಮಗಾರಿ: ಗ್ರಾಮಸ್ಥರ ಆಕ್ರೋಶ

ಕುಶಾಲನಗರ, ಸೆ 23:ಕುಶಾಲನಗರ ತಾಲೂಕು ಹಾರಂಗಿ ಗ್ರಾಮದ ಮುಖ್ಯರಸ್ತೆಯಲ್ಲಿ ಕಿರು ಸೇತುವೆ ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ, ಕೇವಲ ಒಂದು ತಿಂಗಳಲ್ಲಿ ಮುಗಿಸಬೇಕಾದ ಕಾಮಗಾರಿಯನ್ನು ವರ್ಷಗಳ ಕಾಲ ಎಳೆದಾಡುತ್ತಿದ್ದಾರೆ

ಈ ಮಾರ್ಗದಲ್ಲಿ ನಡೆದುಕೊಂಡು ಸರ್ಕಾರಿ ಶಾಲೆಗೆ ಹೋಗುವಂತ ಮಕ್ಕಳು ಮತ್ತು ಬೈಕ್ ಸವಾರರು ಬಿದ್ದು ಗಾಯಗೊಂಡಿರುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು ಕೂಡ ಕಾಮಗಾರಿಯನ್ನು ಪೂರ್ಣಗೊಳಿಸದೇ ಇರುವುದು ಅಧಿಕಾರಿಗಳ ನಿರ್ಲಕ್ಷಿತನ ಮತ್ತು ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತಿದೆ
ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಾಸಕರಾದ ಮಂತರ್ ಗೌಡ ರವರ ಗಮನಕ್ಕೆ ತಂದು ಅವರು ಕೂಡ ಕಾರ್ಯಪಾಲಕ ಅಭಿಯಂತರರಾದ ಪುಟ್ಟಸ್ವಾಮಿ ರವರಿಗೆ ಕರೆ ಮಾಡಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಮೂರು ತಿಂಗಳ ಹಿಂದೆಯೇ ಸೂಚಿಸಿದರು ಆದರೂ ಕೂಡ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಮಾರ್ಗವನ್ನು ಅವಲಂಬಿಸಿರುವ ಈ ಭಾಗದ ಗ್ರಾಮಸ್ಥರಿಗೂ ಕೂಲಿ ಕಾರ್ಮಿಕರಿಗೂ ಶಾಲಾ ವಾಹನಗಳಿಗೂ ತೀರ ತೊಂದರೆ ಉಂಟಾಗಿದೆ ಒಂದು ವಾರದ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸದೆ ಇದ್ದರೆ ಗ್ರಾಮಸ್ಥರು
ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!