ಕಾರ್ಯಕ್ರಮ

ಕುಶಾಲನಗರದಲ್ಲಿ ಸೈರಸ್ ಆಸ್ಪತ್ರೆ ಲೋಕಾರ್ಪಣೆ

ಕುಶಾಲನಗರ, ಸೆ 23: ಕುಶಾಲನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸೈರಸ್ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಲಾಯಿತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡುರಾವ್ ನೂತನ ಆಸ್ಪತ್ರೆ ಲೋಕಾರ್ಪಣೆಗೊಳಿಸಿದರು. ನಂತರ ಮಾತನಾಡಿದ ಅವರು, ಅತ್ಯುನ್ನತ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆಗಳ ಅವಶ್ಯಕತೆ ಹೆಚ್ಚಿದೆ. ಕುಶಾಲನಗರದಲ್ಲಿ ದೊಡ್ಡ ಮಟ್ಟದ ಈ ಆಸ್ಪತ್ರೆಯಿಂದ ಜನತೆಗೆ ಅನೂಕೂಲ ಒದಗಲಿದೆ. ಕೊಡಗಿನ ಜಿಲ್ಲಾಸ್ಪತ್ರೆಯನ್ನು ಕೂಡ ಮೇಲ್ದರ್ಜೆಗೆ ಏರಿಕೆ ಮಾಡಲಾಗುತ್ತಿದೆ. ಕುಶಾಲನಗರದಲ್ಲಿ ಕೂಡ 41 ಕೋಟಿ ವೆಚ್ಚದಲ್ಲಿ ತಾಲೂಕು ಆಸ್ಪತ್ರೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ. ಸುಸಜ್ಜಿತ ಗುಣಮಟ್ಟದಲ್ಲಿ ತಾಲೂಕಿನ 100 ಬೆಡ್ ಗಳ ನೂತನ ಆಸ್ಪತ್ರೆಯನ್ನು ಶೀಘ್ರದಲ್ಲೆ ಲೋಕಾರ್ಪಣೆಗೊಳಿಸಲಾಗುವುದು. ವಿರಾಜಪೇಟೆಯಲ್ಲಿ ಕೂಡ 250 ಬೆಡ್ ಆಸ್ಪತ್ರೆ ನಿರ್ಮಾಣ ಚಿಂತನೆ ಹೊಂದಲಾಗಿದೆ ಎಂದರು. ರಾಜ್ಯ ಸರಕಾರ ಕೂಡ ಅಭಿವೃದ್ಧಿಗೆ, ನೂತನ ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸುತ್ತಿದೆ ಎಂದು ತಿಳಿಸಿದರು.

ರೆಡಿಯಾಲಜಿ ಹಾಗೂ ಕ್ಯಾಥ್ ಲ್ಯಾಬ್ ಉದ್ಘಾಟಿಸಿದ ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಮನುಷ್ಯನಿಗೆ ಉತ್ತಮ
ಆರೋಗ್ಯವೇ ನಿಜವಾದ ಆಸ್ತಿ. ಆಸ್ಪತ್ರೆಗಳಲ್ಲಿ ರೋಗಿಗಳ ಕಾಳಜಿಯೊಂದಿಗೆ ಅವರೊಂದಿಗೆ ಸೌಜನ್ಯಯುತ ವರ್ತನೆಯಿಂದ ರೋಗಗಳನ್ನು ಬಹುಭಾಗ ಗುಣಪಡಿಸುವ ಶಕ್ತಿಯಿದೆ. ಇದನ್ನು ಎಲ್ಲರೂ ಪಾಲಿಸಿದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ. ಗುಣಮಟ್ಟದ ಚಿಕಿತ್ಸೆಯೊಂದಿಗೆ ಎಲ್ಲರ ಕೈಗೆಟಕುವ ದರದಲ್ಲಿ ಚಿಕಿತ್ಸೆ ಒದಗಿಸಲು ಅವರು ಕರೆ ನೀಡಿದರು.

ಈ ಸಂದರ್ಭ ಸೈರಸ್ ಹೆಲ್ತ್ ಕೇರ್ ಗ್ರೂಪ್ ಚೇರ್ಮೆನ್ ಡಾ. ಜೈನುಲಾ ಅಬಿದೀನ್, ವೈಸ್ ಚೇರ್ಮೆನ್ ಡಾ.ಜಿನಾಶ್ ಟಿ.ಪಿ, ಬೋಟ್ಸ್ವಾನ ಹೈ ಕಮಿಷನರ್ ಗಿಲ್ಬರ್ಟ್, ಕೋಯಿಮ್ಸ್
ಡಿಎಚ್ಒ ಸತೀಶ್, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಮಾಜಿ ಶಾಸಕ ಇಬ್ರಾಹಿಂ, ಕಾಂಗ್ರೆಸ್ ಮುಖಂಡ ಕೆ.ಕೆ.ಮಂಜುನಾಥ್ ಕುಮಾರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!