ಅವ್ಯವಸ್ಥೆ

ಕಾವೇರಿ ನದಿಗೆ ಹೋಟೆಲ್, ಲಾಡ್ಜ್, ಹೋಂಸ್ಟೇ, ರೆಸಾರ್ಟ್ ಗಳಿಂದ ತ್ಯಾಜ್ಯ: ಪರಿಶೀಲನೆ

ಕುಶಾಲನಗರ, ಸೆ 08: ಕಾವೇರಿ ನದಿ ತೀರದ ಹೋಟೆಲ್, ಲಾಡ್ಜ್, ಹೋಂಸ್ಟೇ ಹಾಗೂ ರೆಸಾರ್ಟ್ ಗಳಿಂದ ತ್ಯಾಜ್ಯ ನೀರನ್ನು ಸಂಸ್ಕರಿಸದ ನೇರವಾಗಿ ನದಿಗೆ ಬಿಡುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿಯ ರಸಲ್ಪುರ ಚಿಕ್ಕಬೆಟಗೇರಿ ಹಾಗೂ ಬಸವನಹಳ್ಳಿ ಗ್ರಾಮದ ವಾಣಿಜ್ಯ ಉದ್ದಿಮೆಗಳಿಗೆ ದಿಡೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ಮಲಿನ ನೀರನ್ನು ನೇರವಾಗಿ ಚರಂಡಿಗಳ ಮೂಲಕ ನದಿಗಳಿಗೆ ಹರಿಸುತ್ತಿರುವ ಉದ್ದಿಮೆದಾರರಿಗೆ ಲೈಸೆನ್ಸ್ ಅನ್ನು ರದ್ದು ಪಡಿಸುವ ಎಚ್ಚರಿಕೆ ನೀಡಲಾಯಿತು ಹಾಗೂ 15 ದಿನಗಳ ಕಾಲಾವಕಾಶವನ್ನು ನೀಡಿದ್ದು ಈ ಅವಧಿಯಲ್ಲಿ STP ನಿರ್ಮಾಣ ಮಾಡಿ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡುವ ಬಗ್ಗೆ ತಿಳಿ ಹೇಳಲಾಯಿತು

ವಾಣಿಜ್ಯ ಸಂಸ್ಥೆಗಳು ನಾಮಫಲಕಗಳಲ್ಲಿ ಶೇಕಡ 60ರಷ್ಟು ಕನ್ನಡ ಬಳಸುತ್ತಿರುವುದನ್ನು ಈ ಸಂದರ್ಭದಲ್ಲಿ ಖಾತ್ರಿಪಡಿಸಲಾಯಿತು. ಅಲ್ಲದೆ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೆ ಅನಧಿಕೃತವಾಗಿ ವಾಣಿಜ್ಯ ವ್ಯವಹಾರಗಳನ್ನು ನಡೆಸುತ್ತಿರುವ ಉದ್ದಿಮೆದಾರರಿಗೆ ಹಾಗೂ ವಾರ್ಷಿಕ ತೆರಿಗೆ ಪಾವತಿಸದಿರುವ ವರ್ತಕರಿಗೆ ನೋಟಿಸ್ ಜಾರಿ ಮಾಡಲಾಯಿತು.

ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮೇಶ್ ಎಂ ಆರ್ ಇವರೊಂದಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸೌಮ್ಯ ಉಪಾಧ್ಯಕ್ಷರಾದ ಪ್ರವೀಣ್ ಕುಮಾರ್ ಗ್ರಾಮ ಪಂಚಾಯತ್ ಸದಸ್ಯರಾದ ಶಿವಪ್ಪ, ಪ್ರದೀಪ್, ಉಮಾ , ಚಿದಾನಂದ , ಸುಶೀಲ, ಯಶೋಧ, ಸರ್ವ ಮಂಗಳ, ನಿತ್ಯಾನಂದ , ಗಂಗಮ್ಮ ಹಾಗೂ ಗ್ರಾಮ ಪಂಚಾಯತ್ ಕಾರ್ಯದರ್ಶಿ ಕುಮಾರಸ್ವಾಮಿ ಕರವಸೂಲಿಗಾರ ಸಮಂತ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button
error: Content is protected !!