ಕುಶಾಲನಗರ, ಸೆ 08: ದಿನಾಂಕ 8/9/2025 ರಂದು ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಕುಶಾಲನಗರ ಮತ್ತು ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಅತ್ತೂರು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿಯವರು ಒಂದು ನೇತ್ರದಾನದಿಂದ ಇಬ್ಬರು ಕಾರ್ನಿಯ ಅಂಧತ್ವ ಹೊಂದಿದವರಿಗೆ ಪ್ರಯೋಜನವಾಗುತ್ತದೆ ದೃಷ್ಟಿಯ ಉಡುಗೊರೆ ಬೆಳಕಿನ ಪರಂಪರೆ, ನೇತ್ರದಾನ ಮಾಡಿ ಬದುಕಿನ ಆಚೆಗೂ ಬೆಳಕಾಗುವ ಬಹುದು ಮರಣ ನಂತರ ಕಣ್ಣುಗಳನ್ನು ದಾನ ಮಾಡಿ, ಕುಟುಂಬ ಮತ್ತು ಸ್ನೇಹಿತರಿಗೂ ಮಾಹಿತಿ ನೀಡಿ, ಸಾಮಾಜಿಕ ಮಾಧ್ಯಮ ಮತ್ತು ಸಮುದಾಯ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಬಹುದು ಎಂಬ ಮಾಹಿತಿ ತಿಳಿಸಿದರು.
ಪೋಷಣ್ ಅಭಿಯಾನದಲ್ಲಿ ಸಾಂಪ್ರದಾಯಿಕ ಸ್ವಚ್ಛತೆಯ ಪೌಷ್ಟಿಕ ಆಹಾರವೇ ನಿಜವಾದ ಶಕ್ತಿ ರೋಗ ನಿರೋಧಕ ಶಕ್ತಿ ಮತ್ತು ಜೀರ್ಣಕ್ರಿಯೆ ಬಲಪಡಿಸುತ್ತದೆ ಸುಸ್ಥಿರ ಮತ್ತು ಪರಿಸರ ಸ್ನೇಹಿ ಜೀವನಶೈಲಿಯಿಂದ ಕಾಯಿಲೆಗಳನ್ನು ದೂರ ಇರಬಹುದು ಸೊನ್ನೆಯಿಂದ ಐದು ವರ್ಷದ ಒಳಗಿನ ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಹದಿಹರೆಯದವರು, ಹಿರಿಯ ನಾಗರಿಕರು, ರಕ್ತಹೀನತೆಯಿಂದ, ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಇದನ್ನು ತಡೆಗಟ್ಟಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವಂತೆ ಶಿಕ್ಷಣ ನೀಡುವುದು ದೇಶದಲ್ಲಿ ಅಪೌಷ್ಟಿಕತೆ ತಡೆಯುವುದು ಕಡಿಮೆ ತೂಕದ ಶಿಶುಗಳ ಜನನ ಮಟ್ಟವನ್ನು ಕಡಿಮೆಗೊಳಿಸುವುದು ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಗುರುತಿಸಿ ಚಿಕಿತ್ಸೆ ನೀಡುವುದು ಈ ಎಲ್ಲಾ ವರ್ಗದವರ ಪೌಷ್ಟಿಕಾಂಶದ ಫಲಿತಾಂಶ ಸುಧಾರಿಸುವುದು ಕುಪೋಷಣೆಯ ಮಟ್ಟವನ್ನು ಕಡಿಮೆಗೊಳಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಆರೋಗ್ಯ ಶಿಕ್ಷಣ ನೀಡಿದರು ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಮಕ್ಕಳಿಗೆ ಅನ್ನಪ್ರಾಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೇಶಿನಿ ಮತ್ತು ಮಮತಾ ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು ಅಂಗನವಾಡಿ ಕಾರ್ಯಕರ್ತೆ ಜ್ಯೋತಿ ಕಾರ್ಯಕ್ರಮದಲ್ಲಿ ನಿರೂಪಿಸಿ ಸ್ವಾಗತ ಮಾಡಿದರು ಶಾಲಾ ಶಿಕ್ಷಕರಾದ ಗೋವಿಂದರಾಜು &CHO ಸೌಮ್ಯ ಪಾಲ್ಗೊಂಡಿದ್ದರು ಆಶಾ ಕಾರ್ಯಕರ್ತೆ ನಾಗರತ್ನ ಮತ್ತು ಸುಮಿತ್ರ, ಗರ್ಭಿಣಿಯರು, ಮಹಿಳೆಯರು ಮತ್ತು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!