ಕುಶಾಲನಗರ, ಆ 11:
ಕೊಡಗು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾಗಿ ಕುಶಾಲನಗರ ಎಂ.ಜಿ.ಎಂ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಅಯ್ಯಂಡ್ರ ಲಿಖಿತ ಟಿ.ಎ ಅವರು ನೇಮಕಗೊಂಡಿದ್ದಾರೆ. 2025- 2026ನೇ ಸಾಲಿನ ಶೈಕ್ಷಣಿಕ ವರ್ಷದ ಒಂದು ವರ್ಷದ ಅವಧಿಗೆ ಮುಂದಿನ ಆದೇಶದ ವರೆಗೆ ಕೊಡಗು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮ ನಿರ್ದೇಶನ ಮಾಡಲಾಗಿದೆ.ಇವರಿಗೆ 13 ವರ್ಷಗಳ ಬೋಧನಾ ಅನುಭವ ಹೊಂದಿದ್ದಾರೆ. ಸಿಂಡಿಕೇಟ್ ಸದಸ್ಯರಾಗಿ, ಆಯ್ಕೆಯಾಗಿರುವ ಅಯ್ಯಂಡ್ರ ಲಿಖಿತ ಟಿ. ಎ, ರವರನ್ನು ವಿವೇಕಾನಂದ ವಿದ್ಯಾಸಂಸ್ಥೆಯ ,ಅಧ್ಯಕ್ಷರಾದ ಶಂಭುಲಿಂಗಪ್ಪ ಎನ್.ಎನ್ ರವರು ಹಾಗೂ ಪದವಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.
Back to top button
error: Content is protected !!