ಕುಶಾಲನಗರ, ಆ 03: ಗುಡ್ಡೆಹೊಸೂರು ಗ್ರಾಪಂ ವ್ಯಾಪ್ತಿಯ ಬೊಳ್ಳೂರು ಗ್ರಾಮದಲ್ಲಿ ದೇವಸ್ಥಾನಗಳ ಸಮೀಪದಲ್ಲಿ ಸ್ಮಶಾನ ನಿರ್ಮಿಸುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತಪಡಿಸಿದ್ದಾರೆ.
ಸುಣ್ಣದಕೆರೆ ಎಂಬಲ್ಲಿ ಈ ಹಿಂದೆ ತೋಟಗಾರಿಕಾ ಇಲಾಖೆಗೆ ಸೇರಿದ ಸರ್ವೇ ನಂ.1/2 ರಲ್ಲಿ
ಸ್ಥಳೀಯ ಗ್ರಾಮ ಪಂಚಾಯ್ತಿಯವರು ಸ್ಮಶಾನ ಮಾಡಲು ಮುಂದಾಗಿರುವುದಕ್ಕೆ ಅಲ್ಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಸಾಧಕ ಬಾಧಕಗಳನ್ನು ಪರಿಶೀಲಿಸದೆ, ಗ್ರಾಮಸ್ಥರ ಅಭಿಪ್ರಾಯ ಪಡೆಯದೆ ಸರ್ವೆ ನಡೆಸಿ ಸ್ಮಶಾನಕ್ಕೆ ಜಾಗ ಗುರುತಿಸಲಾಗಿದೆ.
ಅಲ್ಲದೆ ಈ ಜಾಗದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು ಬೆಳೆದು ನಿಂತಿದೆ. ಅಲ್ಲದೆ ಗ್ರಾಮಕ್ಕೆ ಸೇರಿದ ಗುಳಿಗನ ಸ್ಥಾನ ಗುರುತು ಮಾಡಿದ ಸ್ಥಳದಲ್ಲಿದೆ.
ಪಕ್ಕದಲ್ಲಿ ನಾಗದೇವರ ಬನ, ಶ್ರೀಚಾಮುಂಡೇಶ್ವರಿ, ಮುನೇಶ್ವರ ದೇವರ ಬನಗಳು ಇದ್ದು ಇಲ್ಲಿ ಸ್ಮಶಾನ ನಿರ್ಮಿಸಿದರೆ ಮುಂದೆ ಗ್ರಾಮಕ್ಕೆ ಭಾರಿ ದುರಂತಕ್ಕೆ ಕಾರಣವಾಗಲಿದೆ ಎಂಬುದಾಗಿ
ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಳ್ಳುತಿದ್ದಾರೆ.
ಅಲ್ಲದೆ ಗಿರಿಜನರ ವಠಾರ ಇದಾಗಿದ್ದು, ಪ್ರತಿಯೊಬ್ಬರು ಜಾಗ ಹೊಂದಿದ್ದು,ದೇವಸ್ಥಾನ ಸನಿಹ ಸ್ಮಶಾನ ಬೇಡವೆಂದು ಒತ್ತಾಯಿಸಿದರು. ಇದರ ಬದಲು ಬೇರೆ ಸ್ಥಳ ಗುರುತಿಸಿ ಸ್ಮಶಾನ ನಿರ್ಮಾಣ ಮಾಡಲಿ ಎಂಬುದು ಗ್ರಾಮಸ್ಥರ ವಾದ.
ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರ ಮಾತನಾಡಿ, ಗಿರಿಜನರು ವಾಸವಿರುವ ಪರಿಸರದಲ್ಲಿ ಸ್ಮಶಾನ ನಿರ್ಮಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ
ಲ್ಯಾಂಪ್ಸ್ ನಿರ್ದೇಶಕಿ ಕಮಲ, ಸ್ಥಳೀಯರಾದ ರಾಜಪ್ಪ, ಮಮತ,
ತಮ್ಮು,ಜಾನಕಿ, ಹಾಗೂ ೨೫ ಕ್ಕೂ ಅಧಿಕ ಮಂದಿ ಹಾಜರಿದ್ದರು.
Back to top button
error: Content is protected !!