ಶಿಕ್ಷಣ

ವಿದ್ಯಾರ್ಥಿಗಳು ಸಾಧಿಸುವ ಛಲ ಹೊಂದಬೇಕು: ಶಾಸಕ‌ ಅಪ್ಪಚ್ಚುರಂಜನ್ ಸಲಹೆ

ಕುಶಾಲನಗರ, ಆ 03: ಕೂಡಿಗೆ ಕೃಷಿ ಕ್ಷೇತ್ರದ ಅವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಗೆ ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಭೇಟಿ ನೀಡಿ ಪರಿಶೀಲಿಸಿದರು.
ಈಗಾಗಲೇ ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆಯಾಗಿರುವ 80 ಲಕ್ಷ ರೂ ಹಣದಲ್ಲಿ ಕೈಗೊಳ್ಳಬೇಕಾದ ಶಾಲೆಯ ದುರಸ್ಥಿ ಕಾರ್ಯದ ಕಾಮಗಾರಿಯ ಬಗ್ಗೆ ಸಂಬಂಧಿಸಿದ ಇಂಜಿನಿಯರ್ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.
ಕ್ರೀಡಾ ಶಾಲೆಯ ಬಾಲಕ ಮತ್ತು ಬಾಲಕಿಯರ ವಸತಿ ನಿಲಯದ ದುರಸ್ತಿ, ಶಾಲೆಗೆ ಬಣ್ಣದ ವ್ಯವಸ್ಥೆ, ಶಾಲೆಯ ಮುಂಭಾಗದ ಕಾಂಕ್ರಿಟೀ ಕರಣ, ಪಿ ಯು ಸಿ ವಿಧ್ಯಾರ್ಥಿಗಳ ವಸತಿ ನಿಲಯ ದುರಸ್ಥಿ, ಕುಡಿಯುವ ನೀರಿನ ವ್ಯವಸ್ಥೆಗೆ 50 ಸಾವಿರ ಲೀ ಪ್ರಮಾಣದ ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಶಾಲೆಗೆ ಪ್ರಮುಖವಾಗಿ ಆಗಬೇಕಾದ ದುರಸ್ತಿ ಕೆಲಸವನ್ನು ಕೈಗೊಳ್ಳುವ ಬಗ್ಗೆ ಸ್ಧಳ ಪರಿಶೀಲನೆ ನಡೆಸಿ ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಡೆಸುವಂತೆ ಇಲಾಖೆಯ ಇಂಜಿನಿಯರ್ ಮತ್ತು ಟೆಂಡರ್ ದಾರರಿಗೆ ಸೂಚನೆ ನೀಡಿದರು.
ನಂತರ ಶಾಸಕರು ಕ್ರೀಡಾ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕ್ರೀಡಾ ತರಬೇತಿ, ಪಾಠಪ್ರವಚನ, ಶಾಲೆಯ ವ್ಯವಸ್ಥೆಗಳ ಬಗ್ಗೆ ಸಂವಾದ ನಡೆಸಿ ಮಾಹಿತಿ ಪಡೆದರು.
ಕ್ರೀಡೆ ಹಾಗೂ ಶಿಕ್ಷಣದೊಂದಿಗೆ ವೈಯಕ್ತಿಕ ಅಭಿವೃದ್ದಿ ವಿದ್ಯಾರ್ಥಿಗಳು ಚಿಂತನೆ ಹರಿಸಬೇಕು. ಸರಕಾರ ನೀಡುವ ಪ್ರೋತ್ಸಾಹ, ಶಿಕ್ಷಕರ ಮಾರ್ಗದರ್ಶನದೊಂದಿಗೆ ಸಾಧಿಸುವ ಛಲ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದು ಸಲಹೆ ನೀಡಿದರು. ತಮಗೆ ದೊರೆತ ಸೌಲಭ್ಯಗಳನ್ನು ತಮ್ಮ ಸ್ವಂತ ವಸ್ತುಗಳಂತೆ ಪರಿಗಣಿಸಿ ಕಾಪಾಡಬೇಕಿದೆ ಎಂದರು.
ಈ ಸಂದರ್ಭ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಜಿಲ್ಲಾ ಬಿ ಜೆ ಪಿ ಎಸ್ ಟಿ ಘಟಕದ ಕಾರ್ಯದರ್ಶಿ ಪ್ರಭಾಕರ್, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಗಣೇಶ್, ಕುಮಾರ ಸ್ವಾಮಿ, ಶಾಲೆಯ ಆಡಳಿತಾಧಿಕಾರಿ ಎನ್‌.ಡಿ.ಜಯರಾಮ, ಶಾಲಾ ಮುಖ್ಯೋಪಾಧ್ಯಾಯ ದೇವ್ ಕುಮಾರ್, ಹಾಕಿ ತರಬೇತುದಾರ ಬಿ. ಎಸ್.ವೆಂಕಟೇಶ್ ಸೇರಿದಂತೆ ವಿವಿಧ ವಿಭಾಗದ ತರಬೇತುದಾರರಾದ ಮಂಜುನಾಥ್, ಸುರೇಶ್, ದಿನಮಣಿ, ಸೇರಿದಂತೆ ಶಿಕ್ಷಕರ ವೃಂದ, ವಸತಿ ನಿಲಯದ ಮೇಲ್ವಿಚಾರಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!