ಕ್ರೈಂ

ಹಸು, ಎಮ್ಮೆ ಕಳ್ಳತನ: ನಾಲ್ವರ ಬಂಧನ

ಕುಶಾಲನಗರ, ‌ಜು 08: ದಿನಾಂಕ: 24-06-2025 ರಂದು ನೋಕ್ಕ ಗ್ರಾಮದ ನಿವಾಸಿಯಾ ಆನಂದ ಎ.ಎಸ್. ರವರು ಎಸ್ಟೇಟ್‌ನ ಕೊಟ್ಟಿಗೆಯಲ್ಲಿ ಕಟ್ಟಿದ್ದ 02 ಹಸುಗಳನ್ನು ಕಳ್ಳತನ ಮಾಡಿರುವ ಕುರಿತು ಹಾಗೂ ಭದ್ರಗೋಳ ಗ್ರಾಮದ ನಿವಾಸಿ  ಪಿ.ಪಿ. ಮುತ್ತಣ್ಣ ರವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ 01 ಎಮ್ಮೆಯನ್ನು ಕಳ್ಳತನ ಮಾಡಿರುವ ಕುರಿತು ದೂರು ಸ್ವೀಕರಿಸಿದ್ದು, ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

ಎರಡು ಪ್ರಕರಣಗಳ ಆರೋಪಿ ಪತ್ತೆಗಾಗಿ  ಮಹೇಶ್ ಕುಮಾರ್.ಎಸ್, ಡಿಎಸ್‌ಪಿ, ವಿರಾಜಪೇಟೆ ಉಪವಿಭಾಗ,  ಶಿವರಾಜ ಆರ್.ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ,  ಪ್ರದೀಪ್ ಕುಮಾರ್.ಬಿ.ಕೆ. ಪಿಎಸ್‌ಐ, ಗೋಣಿಕೊಪ್ಪ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 06-07-2025 ರಂದು ಕೇರಳ ರಾಜ್ಯ ಮತ್ತು ಕಾನೂರು ಪ್ರದೇಶದಲ್ಲಿ ಈ ಕೆಳಕಂಡ 04 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ.

ಆರೋಪಿಗಳ ವಿವರ:

1. ಉಬೈದ್.ಕೆ.ಎಂ. (37 ವರ್ಷ), ಚೆನ್ನಯ್ಯನ ಕೋಟಿ ಗ್ರಾಮ, ವಿರಾಜಪೇಟೆ ತಾ.

2. ಗಜನ್ ಗಣಪತಿ, (25 ವರ್ಷ), ಸೀತಾ ಕಾಲೋನಿ, ಪೊನ್ನಂಪೇಟೆ ತಾ.

3. ಹನೀಫ ಸಿ.ಈ, (36 ವರ್ಷ), ಬೇಗೂರು ಗ್ರಾಮ, ಪೊನ್ನಂಪೇಟೆ ತಾ||

4. ಅಜನಸ್ (21 ವರ್ಷ), ಮಾನಂದವಾಡಿ, ಕೇರಳ

ವಶಪಡಿಸಿಕೊಂಡ ಸ್ವತ್ತುಗಳ ವಿವರ;

1) ನಗದು ರೂ 7000

2) ಕೃತ್ಯಕ್ಕೆ ಬಳಸಿದ್ದ ಕೆಎ-45-9927 ರ ಮಹೀಂದ್ರ ಬೊಲೇರೊ ಪಿಕಪ್ ವಾಹನ.

3) ಕೃತ್ಯಕ್ಕೆ ಬಳಸಿದ್ದ ಕೆಎಲ್-12-ಸಿ-3383 ರ ಮಾರುತಿ ಒಮ್ಮಿ ವಾಹನ.

4) ಕೃತ್ಯಕ್ಕೆ ಬಳಸಿದ್ದ ಕೆಎಲ್-20-ಕ್ಯೂ-6784 ರ ಟಾಟಾ ಇಂಟ್ರಾ ವಾಹನ.

5) ಒಂದು ಚಾಕು ಮತ್ತು ಹಗ್ಗ,

6) ಕೃತ್ಯಕ್ಕೆ ಉಪಯೋಗಿಸಿದ ಮೊಬೈಲ್ ಪೋನುಗಳು.

ಸದರಿ ಪ್ರಕರಣದ ಆರೋಪಿಗಳನ್ನು ಪತ್ತೆ ಮಡುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು  ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು  ದಿನೇಶ್ ಕುಮಾರ್.ಬಿ.ಪಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಶ್ಲಾಘಿಸಿರುತ್ತಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!