ಕುಶಾಲನಗರ, ಮೇ 29 : ಇಲ್ಲಿನ ಪುರಸಭೆ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯಿಂದ ಪುನಂ ಲೇಔಟ್ ಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿದ್ದು, ವಾಹನ ಸವಾರರಿಗೆ ತುಂಬ ತೊಂದರೆ ಉಂಟಾಗಿದೆ.
ಈ ಎರಡು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಪಡಿಸದೆ ಪುರಸಭೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಇದು ಕಚ್ಚಾ ರಸ್ತೆಯಾಗಿದ್ದು,ಈ ಭಾಗದ ವಿದ್ಯಾರ್ಥಿಗಳಿಗೆ,ಕಾರ್ಮಿಕರಿಗೆ ಹಾಗೂ ಸಾರ್ವಜನಿಕ ಸೂಕ್ತ ರಸ್ತೆ ಇಲ್ಲದೆ ತುಂಬ ತೊಂದರೆ ಆಗಿದೆ. ಪುನಂ,ಚಾಮುಂಡೇಶ್ವರಿ, ಮೌಲ್ಯ ಹಾಗೂ ಡಿಮ್ಸ್ ಲೇಔಟ್ ಗಳ ನಿವಾಸಿಗಳು ತಮ್ಮ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗೆ ರಾಷ್ಟ್ರೀಯ ಹೆದ್ದಾರಿ ಗಂಧದಕೋಟೆ, ಬೈಚನಹಳ್ಳಿ ಮಾರ್ಗವಾಗಿ ಪಟ್ಟಣಕ್ಕೆ ಬರಬೇಕಿದೆ. ವಿದ್ಯಾರ್ಥಿ ಕೂಡ ಶಾಲೆ,ಕಾಲೇಜಿಗೆ ಹೋಗಲು ಇದೇ ಮಾರ್ಗ ಅನಿವಾರ್ಯವಾಗಿದೆ.ಈ ರಸ್ತೆಯಲ್ಲಿ ನೂರಾರು ವಾಹನಗಳು ನಿತ್ಯ ಸಂಚಾರಿಸುವುದರಿಂದ ಪರ್ಯಾಯ ಮಾರ್ಗ ಈ ಭಾಗದ ಜನರಿಗೆ ಅಗತ್ಯವಾಗಿದೆ.ಆದ್ದರಿಂದ ಕೂಡಲೇ ಗುಂಡೂರಾವ್ ಬಡಾವಣೆಯಿಂದ ಈ ನೂತನ ಲೇಔಟ್ ಗಳಿಗೆ ರಸ್ತೆ ನಿರ್ಮಿಸಿ ಕೊಡಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ.
Back to top button
error: Content is protected !!