ಕುಶಾಲನಗರ, ಮೇ 27:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಕತ್ತೂರು ಗ್ರಾಮದ ನಿವಾಸಿಯಾದ ಅಬ್ಬಾಸ್.ಎ.ಎಂ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 13 ಚೀಲ ಒಣಗಿದ ಕಾಫಿಯನ್ನು ದಿನಾಂಕ: 08-05-2025 ರಂದು ಮತ್ತು ಹೊಕ್ಕೇರಿ ಗ್ರಾಮ ನಿವಾಸಿ ಲಾವಿನ್.ಬಿ.ಡಿ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 5 ಚೀಲ ಕಾಫಿಯನ್ನು ದಿನಾಂಕ: 14-05-2025 ರಂದು ಹಾಗೂ ಮೇಕೇರಿ ಗ್ರಾಮದ ನಿವಾಸಿಯಾದ ದಿಗಂತ್ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 15 ಚೀಲ ಕಾಫಿಯನ್ನು ದಿ: 19-05-2025 ರಂದು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿರುತ್ತದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ & ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಸದರಿ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಸೂರಜ್ ಪಿ.ಎ, ಡಿಎಸ್ಪಿ, ಮಡಿಕೇರಿ ಉಪ ವಿಭಾಗ, ಚಂದ್ರಶೇಖರ್.ಹೆಚ್.ವಿ, ಪಿಐ, ಮಡಿಕೇರಿ ಗ್ರಾಮಾಂತರ ಪೊ.ಠಾ, ವೆಂಕಟ್.ಹೆಚ್.ಈ, ಪಿಎಸ್ಐ. ಮಡಿಕೇರಿ ಗ್ರಾಮಾಂತರ ಪೊ.ಠಾ ಮತ್ತು ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು, ಡಿಸಿಅರ್ಬಿ ಸಿಬ್ಬಂದಿಗಳು ಹಾಗೂ ತಾಂತ್ರಿಕ ಘಟಕ ನಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 27-05-2025 ರಂದು 03 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
ಆರೋಪಿಗಳ ವಿವರ:
1. ಮಹೇಶ್.ಎಲ್, 44 ವರ್ಷ, ಸುಂಠಿಕೊಪ್ಪ,
2. ವಿನೋದ್.ಕೆ.ಆರ್. 39 ವರ್ಷ, ಮದೆ ಗ್ರಾಮ.
3. ರಾಮಯ್ಯ.ಕೆ.ಎಂ, 28 ವರ್ಷ, 2 ನೇ ಮೊಣ್ಣಂಗೇರಿ, ಗಾಳಿಬೀಡು ಗ್ರಾಮ.
ಮೂರು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳ ವಿವರ;
1. 31 ಚೀಲಕಾಫಿ
2. ಒಂದು ಮಾರುತಿ ಈಕೋ ವಾಹನ,
3. ರಾಡ್ ಕಟ್ಟರ್
4. ಕಬ್ಬಿಣದ ಹಾರೆ
ಸದರಿ ಆರೋಪಿಗಳು ಮೂರು ಪ್ರಕರಣಗಳಲ್ಲಿಯೂ ಸಹ ಕಾಫಿ ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿರುತ್ತದೆ.
Back to top button
error: Content is protected !!