ಪ್ರಕಟಣೆ

ಪ್ರತಿಷ್ಠೆ ಬಿಡಿ ಒಂದಾಗಿ ಮುನ್ನಡೆಯಲು‌ ನಾಪಂಡ ಮುತ್ತಪ್ಪ ಕರೆ

ಕುಶಾಲನಗರ, ಫೆ 12:ಕೊಡಗಿನ ಎರಡು ಪ್ರಭಲ ಸಮುದಾಯಗಳು ಪ್ರತಿಷ್ಠೆಗೆ ಬಿದ್ಡು ಬೀದಿ ಕಾಳಗವನ್ನು ಬಿಟ್ಟು ತಮ್ಮ ತಮ್ಮಬದುಕು ಕಟ್ಟಿಕೊಳ್ಳುವ, ತಮ್ಮತಮ್ಮವ್ಯವಹಾರ ಮುಂದುವರೆಸುವದರತ್ತ ಗಮನ ಹರಿಸಿ ಎಂದು ಮುಖಂಡ ನಾಪಂಡ ಮುತ್ತಪ್ಪ ಕರೆ ನೀಡಿದ್ದಾರೆ. ಬಟ್ಟೆ ಬಿಚ್ಚುವ ಹಪ ಹಪಿಗೆ ಬಿದ್ದಿರುವ ಇಂದಿನ ಸಂದರ್ಭದಲ್ಲಿ ಬಟ್ಟೆ ಹಾಕಿ ದೇವಾಲಯಕ್ಕೆ ಬರುತ್ತೇವೆ ಅನ್ನುವವರಿಗೆ ಮನ್ನಣೆ ಕೊಡಿ. ಜನಾಂಗಗಳನ್ನು ಕ್ಷುಲುಕ ಕಾರಣಗಳಿಗೆ ನಿಂದಿಸುವುದನ್ನು ತಕ್ಷಣದಿಂದ ನಿಲ್ಲಿಸಿ. ಬೇರೆಯವರನ್ನ ಕೆಟ್ಟದಾಗಿ ನಿಂದಿಸುವುದು ನಮ್ಮನ್ನು ನಾವು ನಿಂದಿಸಿಕೊಂಡಂತೆ, ನಮ್ಮ ಹಿರಿಯರನ್ನು, ನಮ್ಮ ಸಮುದಾಯವನ್ನು, ನಮ್ಮ ಕುಟುಂಬವನ್ನು , ನಮ್ಮ ಮನೆಯ ಹೆಣ್ಣು ಮಕ್ಕಳನ್ನ ನಿಂದಿಸಿಕೊಂಡಂತೆ ಎಂಬುದನ್ನು ತಿಳಿಯಿರಿ!

ಆಯಾ ಸಮುದಾಯದ ಗತಿಸಿ ಹೋದ ಹಿರೋಗಳನ್ನು ಗುಲಾಮರು, ಕಾಲ್ಪನಿಕ ಎಂಬ ಕೆಟ್ಟ ಪದ ಬಳಕೆಯನ್ನು ನಿಲ್ಲಿಸಿ! ಧಾರ್ಮಿಕ ಕೋಮುವಾದ, ಜನಾಂಗೀಯ ಕೋಮುವಾದಿ ಮನಸ್ಥಿತಿಯಿಂದ ಹೊರ ಬಂದು ಒಟ್ಟಾರೆ ಸಮಾಜದ, ಜಿಲ್ಲೆಯ, ರಾಜ್ಯದ ಮತ್ತು ದೇಶದ ಅಭ್ಯುದಯಕ್ಕಾಗಿ ದುಡಿಯುವ!
ಜಗತ್ತಿನಲ್ಲಿ ಇನೆಲ್ಲೂ ಇಲ್ಲದ ಎರಡು ವಿಶಿಷ್ಠ ಸಂಸ್ಕೃತಿಯ ಸಮುದಾಯಗಳು ತಮ್ಮ ವೈಶಿಷ್ಠತೆಯನ್ನು ಕಾಪಾಡಿಕೊಳ್ಳಲು ಪರಸ್ಪರ ಬದ್ದತೆಯಿಂದ ಮುನ್ನಡೆಯಿರಿ! ಜಗತ್ತಿನಲ್ಲಿ ಯಾರು ಶ್ರೇಷ್ಠರಲ್ಲ, ಯಾರೂ ಕನಿಷ್ಠರಲ್ಲ ಎಂಬ ಕನಿಷ್ಟ ಮಾನವೀಯ ಮೌಲ್ಯಗಳನ್ನು ಅರಿತು ಮುನ್ನಡೆಯೋಣ!
ರಾಜಕೀಯ ಬೇಳೆ ಬೇಯಿಸಿಕೊಳ್ಳುವ ವ್ಯಕ್ತಿಗಳ, ಪಕ್ಷ ಪಂಗಡಗಳ, ಸಂಘಟನೆಗಳ, ತಮ್ಮ ತಮ್ಮ ಜಾತಿಯಲ್ಲಿ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ, ಹೆಸರುಗಳಿಸಲು, ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಸಮುದಾಯದ ಜನರ ದಾರಿ ತಪ್ಪಿಸುವವರ ಕುತಂತ್ರಕ್ಕೆ ಬಲಿ ಪಶುಗಳಾಗದೆ ನಮ್ಮ ಮುಂದಿನ ಪೀಳಿಗೆಯ ಶಾಂತಿ ಮತ್ತು ಸೌಹಾರ್ಧತೆಗಾಗಿ ಒಂದಾಗಿ ಸಾಗುವ ದೃಡ ಸಂಕಲ್ಪ ಮಾಡೋಣ.
ಸಾಕಿನ್ನು ಅಪನಂಬಿಕೆ, ಸಂಶಯ, ಕೀಳರಿಮೆ. ಇನ್ನು ಮುಂದಾದರೂ ನಮ್ಮ ಒಳಿತಿಗೆ ಮುನ್ನಡೆಯೋಣ ಎಂದು ಅವರು ಆಶಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!