ಕಾರ್ಯಕ್ರಮ

ವೃದ್ಧಾಶ್ರಮದಲ್ಲಿ ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಉದ್ಯಮಿ ಯಶ್ವಂತ್ ಅವರ ಜನ್ಮ ದಿನಾಚರಣೆ

ಕುಶಾಲನಗರ,ಜ೧೬: ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಉದ್ಯಮಿ ಯಶ್ವಂತ್ ಅವರ ಜನ್ಮ ದಿನಾಚರಣೆಯು ಕೂಡಿಗೆಯ ಶಕ್ತಿ ವೃದ್ಧಾಶ್ರಮದಲ್ಲಿ ಅನ್ನದಾನ ಮಾಡುವ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಹಿರಿಯ ಪತ್ರಕರ್ತರಾದ ಕೆ.ಕೆ.ನಾಗರಾಜ್ ಶೆಟ್ಟಿ, ಇಂದಿನ‌ ಕಾಲದಲ್ಲಿ ಜನ್ಮ ದಿನದಂದು ಪಾರ್ಟಿ ಎಂದು ಹಣವನ್ನು ದುಂದುವೆಚ್ಚ‌ ಮಾಡುವುದನ್ನು ಕಾಣಬಹುದು. ಆದರೆ ತಮ್ಮ ಜನ್ಮ ದಿನವನ್ನು ವೃದ್ಧಾಶ್ರಮದಲ್ಲಿ ಆಚರಿಸುತ್ತಿರುವುದು ಶ್ಲಾಘನೀಯ. ಮುಂದೆಯೂ ಕೂಡಾ ಇನ್ನಷ್ಟು ಸಮಾಜಮುಖಿ ಕೆಲಸಗಳು ನಿಮ್ಮಿಂದ ಆಗಲಿ‌‌ ಎಂದರು.
ಕೂಡುಮಂಗಳೂರು ಗ್ರಾ.ಪಂ ಸದಸ್ಯ ಕೆ.ಬಿ.ಶಂಶುದ್ಧೀನ್ ಹಾಗೂ ಯಶ್ವಂತ್ ಮಾತನಾಡಿ, ಜನ್ಮ‌ದಿನವನ್ನು ಆಶ್ರಮದ ಹಿರಿಯರೊಂದಿಗೆ ಆಚರಿಸುತ್ತಿರುವುದು ಹಾಗೂ ಅವರಿಗೆ ಅನ್ನದಾನ ಮಾಡುತ್ತಿರುವುದು ಮನಸ್ಸಿಗೆ ನೆಮ್ಮದಿ ತಂದಿದೆ. ಯುವಕರು ಇಂತಹ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.
ಗೆಳೆಯರ ಬಳಗದ ಅಧ್ಯಕ್ಷರು ಹಾಗೂ ಪುರಸಭೆ ಸದಸ್ಯರಾದ ವಿ.ಎಸ್.ಆನಂದ್ ಕುಮಾರ್ ಮಾತನಾಡಿ, ನಮ್ಮ ಬಳಗದ ಯುವ ಸದಸ್ಯರಿಬ್ಬರು ತಮ್ಮ ಜನ್ಮ‌ದಿನವನ್ನು ವೃದ್ಧಾಶ್ರಮದಲ್ಲಿ ಆಚರಿಸುತ್ತಿರುವುದು ನಮ್ಮೆಲ್ಲರಿಗೆ ಮಾದರಿಯಾಗಿದೆ ಎಂದರು.‌
ಈ ಸಂದರ್ಭ ಶಕ್ರಿ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು, ಗೆಳೆಯರ ಬಳಗದ ಸದಸ್ಯರು ಹಾಗೂ ಆಶ್ರಮದ ಹಿರಿಯರು ಇದ್ದರು. ‌

Related Articles

Leave a Reply

Your email address will not be published. Required fields are marked *

Back to top button
error: Content is protected !!