ಕುಶಾಲನಗರ, ನ 30:
ಶಿರಂಗಾಲ ಗ್ರಾಮದ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಲರವ ಸಡಗರ ಸಂಭ್ರಮ ಹೇಳತ್ತಿರದಾಗಿತ್ತು. ಇದಕ್ಕೆ ಕಾರಣ ಮಕ್ಕಳೇ ಹಮ್ಮಿಕೊಂಡಿದ್ದ ಸಂತೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಆಶಾ ರಾಣಿ ಭಾಗವಹಿಸಿ ಮಕ್ಕಳನ್ನು ಹುರಿದುಂಬಿಸಿದರು. ಮಕ್ಕಳಿಗೆ ಕೇವಲ ಪಠ್ಯ ಶಿಕ್ಷಣ ಮಾತ್ರ ನೀಡುವುದಲ್ಲ, ಅವರಿಗೆ ಸಣ್ಣ ವಯಸ್ಸಿನಲ್ಲೇ ವ್ಯವಹಾರ ಜ್ಞಾನ ಕಲಿಸಬೇಕಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರತ್ನಮ್ಮ ಪ್ರಸನ್ನ ಹೇಳಿದರು. ಶಿರಂಗಾಲ ಗ್ರಾಮದಲ್ಲಿರುವ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಯೋಜಿಸಿದ ಮಕ್ಕಳ ಸಂತೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪೋಷಕರು ಮಕ್ಕಳಿಗೆ ಪಠ್ಯ ಚಟುವಟಿಕೆಗೆ ಸೀಮಿತಗೊಳಿಸುವುದು ಈಗ ಹೆಚ್ಚಾಗಿದೆ ಅದು ಮಕ್ಕಳಲ್ಲಿ ವ್ಯವಹಾರಿಕ ಜ್ಞಾನದ ಕೊರತೆ ಜೊತೆ ಯಾವ ವಸ್ತುವಿಗೆ ಎಷ್ಟು ಹಣ ವಹಿಸಬೇಕು ಅದರ ಉತ್ಪಾದನೆಗೆ ಎಷ್ಟು ಖರ್ಚಾಗುತ್ತದೆ ಎನ್ನುವ ಕುರಿತು ಜ್ಞಾನ ವಿದ್ಯಾರ್ಥಿ ದೆಸೆಯಿಂದಲೇ ನೀಡುವುದಕ್ಕೆ ಆರಂಭಿಸಬೇಕು ಎಂದು ಇದೇ ಸಂದರ್ಭದಲ್ಲಿ. ತಿಳಿಸಿದರು ನಂತರ ಶಾಲಾ ಮುಖ್ಯ ಶಿಕ್ಷಕಿ ಆಶಾರಾಣಿ ಮಾತನಾಡಿ. ನಮ್ಮ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮಕ್ಕಳ ಸಂತೆ ಪ್ರತಿ ವರ್ಷ ಆಯೋಜಿಸುತ್ತಿದ್ದು ಮಕ್ಕಳು ಖುಷಿಯಿಂದ ಪಾಲ್ಗೊಳ್ಳುತ್ತಾರೆ ಪೋಷಕರು ಅದಕ್ಕೆ ಪ್ರೋತ್ಸಾಹ ನೀಡಬೇಕು ಮಕ್ಕಳ ಸಂತೆ ಪ್ರೋತ್ಸಹಿಸುವುದಕ್ಕೆ ಆಗಮಿಸಿರುವ ಪೋಷಕರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ವಿಭಿನ್ನ ವ್ಯವಹಾರದ ಜ್ಞಾನವನ್ನು ಮಕ್ಕಳಿಗೆ ತಿಳಿಸಬೇಕು ಅವರು ಕೇಳುವ ಪ್ರಶ್ನೆಗೆ ಸಮಾಧಾನದ ಉತ್ತರ ನೀಡಬೇಕು ಎಂದು ಹೇಳಿದರು. ವಿದ್ಯಾರ್ಥಿ ವೈಷ್ಣವಿ ಮಾತನಾಡಿ. ನಮ್ಮ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಮಗೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ವ್ಯವಹಾರಿಕ ಜ್ಞಾನ ಬೆಳೆಸುವ ಸದ್ದು ಉದ್ದೇಶದಿಂದ ಮಾರುಕಟ್ಟೆಯ ರೀತಿಯಲ್ಲಿಯೇ ವ್ಯವಹರಿಸುವ ಮಕ್ಕಳ ಸಂಖ್ಯೆ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿ ನಾವುಗಳು ಚಿಕ್ಕವಯಸಿನಲ್ಲಿ ಮಕ್ಕಳು ಖುಷಿ ಖುಷಿಯಾಗಿ ವ್ಯಾಪಾರದಲ್ಲಿ ಹೇಗೆ ತೊಡಗಿಸಿಕೊಂಡಿದ್ದೇವೆ ಎಂದು ಇದೇ ಸಂದರ್ಭ ತಿಳಿಸಿದರು. ಶನಿವಾರ ಬೆಳಿಗ್ಗೆಯಿಂದಲೇ ಶಿರಂಗಾಲ ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ವಿದ್ಯಾರ್ಥಿಗಳು ಬಾಳೆಹಣ್ಣು ತರಕಾರಿ ತಿಂಡಿ ತಿನಿಸು ಸೌತೆಕಾಯಿ. ಚುರುಮುರಿ. ಐಸ್ ಕ್ರೀಮ್. ಲೆಮೆನ್ ಜ್ಯೂಸ್. ವಿವಿಧ ರೀತಿಯ ಹಣ್ಣು ಹಂಪಲುಗಳು ಸೇರಿದಂತೆ ಇನ್ನಿತರ ವಸ್ತುಗಳ ವ್ಯಾಪಾರವನ್ನ ಅತಿ ಕಡಿಮೆ ದರದಲ್ಲಿ ವ್ಯಾಪಾರ ಮಾಡುತ್ತಿದ್ದರು ಮಕ್ಕಳು ಬಂಡವಾಳ ಹಾಕಿ ತಂದ ತಿನಿಸು ತರಕಾರಿ ತಾವು ಹೂಡಿದ ಬಂಡವಾಳಕ್ಕೆ ಲಾಭಾಂಶವನ್ನು ತೆಗೆಯುವ ಗಮನದಲ್ಲಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದರು.
ತಂದೆ ತಾಯಿಯರ ಕಷ್ಟದ ಬಗ್ಗೆ ಮಕ್ಕಳಿಗೆ. ಮಕ್ಕಳ ವ್ಯಾಪಾರವನ್ನು ಕಂಡು ಗ್ರಾಹಕರು ಕೂಡ ಆಗಮಿಸಿ ಮಕ್ಕಳಿಂದ ಎಲ್ಲಾ ವಸ್ತುಗಳನ್ನು ರೇಟ್ ಗಳ ಕೇಳಿ ಅವರಿಂದ ತಮಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡರು ಇನ್ನು ಈ ಕಾರ್ಯಕ್ರಮದ ಉದ್ದೇಶವೇನೆಂದರೆ ಕೆಲ ತಂದೆ ತಾಯಿಗಳು ಇಂತಹದೇ ವ್ಯಾಪಾರ ಮಾಡಿ ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ ತಂದೆ ತಾಯಿಯರ ಕಷ್ಟ ಯಾವ ರೀತಿ ಎಂಬುದು ಮಕ್ಕಳಿಗೆ ತಿಳಿಯುತ್ತದೆ. ಮಕ್ಕಳು ಅಂದ್ರೆ ಕೇವಲ ಆಟ ಪಾಠ ಎಂಜಾಯ್ ಮೆಂಟ್ ಬಿಸಿಯಾಗಿರುತ್ತಾರೆ ಈ ವಿನೂತನ ಕಾರ್ಯಕ್ರಮದ ಮೂಲಕ ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಸುತ್ತಿದ್ದಾರೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೂ ಕೂಡ ಇದರಿಂದ ಲಾಭ ನಷ್ಟದ ಲೆಕ್ಕಾಚಾರವು ಗೊತ್ತಾಗುತ್ತದೆ ಈ ಕಾರ್ಯಕ್ರಮವನ್ನು ನೋಡಿದ ಜನರು ಕೂಡ ಈ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಮ್ಮ ಪ್ರಸನ್ನ. ನಿರ್ದೇಶಕರಾದ ಉಮಾಮಣಿ ಧನೇಂದ್ರ ಕುಮಾರ್. ನಿರ್ದೇಶಕರಾದ ಮಮತಾ ನಾಗಪ್ಪ. ಶಾಲಾ ಮುಖ್ಯ ಶಿಕ್ಷಕರಾದ ಆಶಾ ರಾಣಿ ಎ ಸಿ. ಪೋಷಕರಾದ ಸವಿತಾ ಸುರೇಶ್. ನೀಲಾಂಬಿಕೆ ಚಂದ್ರಪ್ಪ. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಸವರಾಜ್. ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹೇಮಲತಾ. ಕಾರ್ಯದರ್ಶಿ ಕೆ ಸಿ ರವಿ. ಹಾಗೂ. ಕಂಪ್ಯೂಟರ್ ಆಪರೇಟರ್ ಸುಚಿತ್ರ. ಸ್ವಾಮಿ ವಿವೇಕಾನಂದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೃಂದ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರು ಮತ್ತು ಶಾಲಾ ಶಿಕ್ಷಕ ವೃಂದ ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದರು.
Back to top button
error: Content is protected !!