ಟ್ರೆಂಡಿಂಗ್
ಕುಸಿಯುತ್ತಿದೆ ಕುವೆಂಪು ಬಡಾವಣೆ ನದಿ ದಂಡೆ: ಪಾರ್ಕ್ ಕಾವೇರಿ ಪಾಲಾಗುವ ಭೀತಿಯಲ್ಲಿ ನಿವಾಸಿಗಳ
ಯುಜಿಡಿ ಕಾಮಗಾರಿ ವಿರುದ್ದ ಆಕ್ರೋಷ


ಈಗಾಗಲೆ ಈ ಭಾಗದ ಯುಜಿಡಿ ಕಾಮಗಾರಿ ನದಿ ಪಾಲಾಗಿದೆ. ಅವೈಜ್ಞಾನಿಕ ಕಾಮಗಾರಿಯಿಂದ ನದಿಯ ವಿಸ್ತೀರ್ಣ ಹೆಚ್ಚಿಸಿದ್ದಾರೆ. ಪರಿಣಾಮ ನದಿ ತಟದ ಮನೆಗಳು ಕುಸಿಯುವ ಭೀತಿ ಎದುರಾಗಿದೆ. ನದಿ ತಟದಲ್ಲಿ ಬೃಹತ್ ಮರದ ಬುಡ ಸಡಿಲಗೊಂಡು ಕುಸಿದು ಬೀಳಲು ಅಣಿಯಾಗಿದೆ.
ಈ ಮೂಲಕ ಇದರ ಪಕ್ಕದಲ್ಲಿ ಇರುವ ಸುಂದರ ಉದ್ಯಾನ ಕೂಡ ನದಿ ಪಾಲಾಗಲಿದೆ ಎಂದು ಕುವೆಂಪು ಬಡಾವಣೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಆತಂಕ ವ್ಯಕ್ತಪಡಿಸಿದರು.ತಪೋವನ ಬಳಿ ಪ್ರವಾಹ ತಡೆಗೋಡೆ ನಿರ್ಮಿಸಿದ್ದು ಕುವೆಂಪು ಬಡಾವಣೆ ವ್ಯಾಪ್ತಿಯಲ್ಲಿ ಕೂಡ ತಡೆಗೋಡೆ ನಿರ್ಮಾಣಕ್ಕೆ ಶಾಸಕರು ಚಿಂತನೆ ಹರಿಸುವಂತೆ ನಿವಾಸಿಗಳು ಆಗ್ರಹಿಸಿದರು.