ಕಾರ್ಯಕ್ರಮ

ಕರ್ನಾಟಕ ಚಾಲಕರ ‌ಒಕ್ಕೂಟ ಆಶ್ರಯದಲ್ಲಿ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ

ಕುಶಾಲನಗರ, ನ 16:ಕರ್ನಾಟಕ ಚಾಲಕರ ‌ಒಕ್ಕೂಟ ಕುಶಾಲನಗರ ತಾಲೂಕು ಘಟಕದ ಆಶ್ರಯದಲ್ಲಿ ಎರಡನೇ ವರ್ಷದ ಅದ್ದೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಕುಶಾಲನಗರ ಕಾರು ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕೊಡ್ಲಿಪೇಟೆ ಕಿರಿಕೊಡ್ಲಿ‌ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಸಮಾರಂಭ ನಂತರ ಆಶೀರ್ವಚನ ನೀಡಿದ ಅವರು, ಭಾರತ ದೇಶದ ಭವ್ಯ ಪರಂಪರೆ ಇತಿಹಾಸ ಅವಲೋಕಿಸಿದಾಗ ಕರ್ನಾಟಕ ರಾಜ್ಯಕ್ಕೆ ವಿಶಿಷ್ಠ ಸ್ಥಾನವನ್ನು ಗಮನಿಸಬಹುದು. ಇಲ್ಲಿನ ನೆಲ,‌ಜಲ, ಸಾಹಿತ್ಯ, ಸಂಸ್ಕೃತಿ ತನ್ನದೇ ಆದ ವಿಶೇಷ ಸ್ಥಾನ ಪಡೆದುಕೊಂಡಿದೆ.
ಭಾಷೆಣ, ಸಾಹಿತ್ಯ, ಸಂಸ್ಕೃತಿ ಹಾಗೂ ಧರ್ಮ ಒಂದು ರಥದ ನಾಲ್ಕು ಚಕ್ರಗಳಿದ್ದಂತೆ. ಇವೆಲ್ಲವೂ ಕ್ರಿಯಾಶೀಲವಾಗಿದ್ದಾಗ ಮಾತ್ರ ಸದೃಢ ರಾಜ್ಯ ಕಟ್ಟಲು ಸಾಧ್ಯ ಎಂದರು.

ನಮ್ಮ ಕನ್ನಡ
ಭಾಷೆಯನ್ನು ಸದೃಢಗೊಳಿಸಲು ಭಾಷೆಯ ಬಗೆಗಿನ‌ ಕೀಳರಿಮೆ ಸಲ್ಲದು.
ಭಾಷೆ, ಸಾಹಿತ್ಯದ ಉಳಿವಿಗೆ ಎಲ್ಲಾ ಸಂಘಟನೆಗಳು ಶ್ರಮಿಸುತ್ತಿದ್ದರೂ ಚಾಲಕರ ಸಂಘ ಎಲ್ಲದಕ್ಕೂ ಮುಂದೆ ಇದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಎಲ್ಲರ ಮನೆ,ಮನದಲ್ಲಿ ಕನ್ನಡ ಪರಿಪಾಠವಾಗಬೇಕು.‌ಕನ್ನಡ ಮಾತಾಡಲು ಮುಜುಗರಪಡಬಾರದು. ನಮ್ಮ‌ ಭಾಷೆಯ ಬಗ್ಗೆ ಅಭಿಮಾನ ಹೊಂದಬೇಕು. ಆಗ ಮಾತ್ರ ನಮ್ಮ‌ ಭಾಷೆಯ ಅಭಿವೃದ್ಧಿ ಸಾಧ್ಯ ಎಂದರು.

ಕರ್ನಾಟಕ ಚಾಲಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ.ನಾರಾಯಣ ಸ್ವಾಮಿ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಪ್ರಜ್ವಲಿಸುತ್ತಿರುವುದಕ್ಕೆ‌ ಚಾಲಕರೇ ಕಾರಣ. ಚಾಲಕರು, ಮಾಲೀಕರು ಕನ್ನಡ ಉಳಿವಿಗೆ ಸದಾ ಮುಂಚೂಣಿಯಲ್ಲಿದ್ದಾರೆ.‌
ಚಾಲಕ ವರ್ಗ
ನಾಡು,‌ನುಡಿ, ಜಲಕ್ಕಾಗಿ ನಡೆಯುವ ಹೋರಾಟದಲ್ಲಿ ಸದಾ ಮುಂದಿರುತ್ತಾರೆ. ಈ ಕಾರ್ಯ ಬಹಳ ಹಿಂದಿನಿಂದಲೂ ಮುಂದುವರೆದುಕೊಂಡು‌ ಬಂದಿದೆ. ಎಲ್ಲೂರು ಒಗ್ಗೂಡಿ ಇಂತಹ ವೈಭವದ ಕಾರ್ಯಕ್ರಮ ಆಚರಿಸುವಂತಾಗಬೇಕಿದೆ. ದೇಶಾದ್ಯಂತ ಚಾಲಕರ ಒಕ್ಕೂಟ ಮೂಲೆಮೂಲೆಯಲ್ಲೂ ಪಸರಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಚಾಲಕರ ಒಕ್ಕೂಟದ ಹಲವು ಸಮಾಜಮುಖಿ ಕಾರ್ಯಗಳನ್ನು ಕೂಡ ನಡೆಸಿದೆ, ಮುಂದೆಯೂ ನಡೆಸುತ್ತದೆ. ಚಾಲಕರ ಪರವಾಗಿ ಸರಕಾರದ ಮುಂದೆ ವಿವಿಧ ಬೇಡಿಕೆಗಳ ಬಗ್ಗೆ ಧ್ವನಿ‌ ಎತ್ತಿದೆ. ಚಾಲಕರ ಪರವಾಗಿ ಒಕ್ಕೂಟ ಸದಾ ಸೇವೆಗೆ ಸಿದ್ದವಾಗಿದೆ ಎಂದರು.

ಕೊಡಗು ಜಿಲ್ಲಾ ಕನ್ನಡ ಸಿರಿ ಸ್ನೇಹ‌ ಬಳಗದ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಮಾತನಾಡಿದರು. ಕುಶಾಲನಗರ ಆಟೋ ಚಾಲಕರು ನೆರೆಯ ವಯನಾಡಿಗೆ ತೆರಳಿ ಸಹಾಯಹಸ್ತ ಚಾಚಿರುವುದನ್ನು ಇಲ್ಲಿ ಸ್ಮರಿಸಬೇಕಿದೆ. ಇಂತಹ ಹಲವು ಮಾದರಿ ಸೇವೆಗಳಿಗೆ ಚಾಲಕರು, ಮಾಲೀಕರು ಹೆಸರುವಾಸಿಯಾಗಿದ್ದಾರೆ ಎಂದರು.

ತಾಲೂಕು ಸಂಘದ ಅಧ್ಯಕ್ಷ ಬಿ.
ಜೆ.ಅಣ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘದಲ್ಲಿ ನೂರಾರು ಸದಸ್ಯರಿದ್ದರೂ ಕನ್ನಡ ಕಾರ್ಯಕ್ರಮಕ್ಕೆ ಬೆರಳೆಣಿಕೆ ಮಂದಿ ಮಾತ್ರ ಪಾಲ್ಗೊಂಡಿರುವುದು‌ ಕನ್ನಡದ ಬಗೆಗಿನ‌ ತಾತ್ಸಾರ ಮನೋಭಾವ ತೋರಿಸುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಇದೇ ಸಂದರ್ಭ ವಿವಿಧ ‌ಕ್ಷೇತ್ರಗಳ ಸಾಧಕರನ್ನು‌ ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ
ಒಕ್ಕೂಟದ
ರಾಜ್ಯ ಸಂಚಾಲಕ‌ ಕೃಷ್ಣರಾಜ ಅರಸು, ರಾಜ್ಯ ಪ್ರಧಾನ ಕಾರ್ಯದರ್ಶಿ ಯೋಗೇಶ್ ಗೌಡ್ರು, ಸಂಘಟನಾ ಕಾರ್ಯದರ್ಶಿ, ಮಣಿಕಂಠ ಎಂ.ಎನ್.ಎಸ್.ಆರ್.ಗೌಡ್ರು, ಬೆಂಗಳೂರು ನಗರಾಧ್ಯಕ್ಷ ಸಶ್ರುತ್, ಕಾರ್ಯಾಧ್ಯಕ್ಷ ನಾಗರಾಜ್,
, ಕರವೇ ಜಿಲ್ಲಾಧ್ಯಕ್ಷ ದೀಪಕ್,
ಕೊಡಗು‌ ಜಿಲ್ಲಾ ಆಟೋ ಚಾಲಕರು‌ ಮಾಲೀಕರ ಸಂಘದ ಅಧ್ಯಕ್ಷ ಮೇದಪ್ಪ, ಒಕ್ಕೂಟದ ಗೌರವಾಧ್ಯಕ್ಷ ಎಸ್.ಎಸ್.ಫಯಾಜುದ್ದಿನ್, ಒಕ್ಕೂಟದ ಕೊಡಗು‌ ಜಿಲ್ಲಾಧ್ಯಕ್ಷ ಸಯ್ಯದ್ ಮುಜೀಬ್, ಉಪಾಧ್ಯಕ್ಷ ಕೆ.ಚಂದ್ರು, ಪ್ರಧಾನ ಕಾರ್ಯದರ್ಶಿ ಸಯ್ಯದ್ ರಿಯಾಜ್, ಸಂಘಟನಾ ಕಾರ್ಯದರ್ಶಿ ಮಂಜು,
ಸಾಹಿತಿ ವಿನೋದ್ ಪೊನ್ನಂಪೇಟೆ, ಕುಶಾಲನಗರ ಪುರಸಭೆ ಸದಸ್ಯ ಅಮೃತ್ ರಾಜ್, ಒಕ್ಕೂಟದ ತಾಲೂಕು ಸಂಘದ ಉಪಾಧ್ಯಕ್ಷ ಮನುಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಆನಂದ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಇದ್ದರು.
ಬೆಳಗ್ಗೆ ಕನ್ನಡ ಧ್ವಜಾರೋಹಣ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಕೊಡಗು ಗಡಿ ಕಾವೇರಿ‌ ಮಾತೆ ಪ್ರತಿಮೆಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸದಾಧಿವ ಸ್ವಾಮೀಜಿ, ರಾಜ್ಯಾಧ್ಯಕ್ಷ ನಾರಾಯಣಸ್ವಾಮಿ, ಸಂಚಾಲಕ ಕೃಷ್ಣರಾಜ ಅರಸು ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ವೇದಿಕೆ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Related Articles

Leave a Reply

Your email address will not be published. Required fields are marked *

Back to top button
error: Content is protected !!