ಧಾರ್ಮಿಕ
ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿವಿಧ ಪೂಜೆ.
ಕುಶಾಲನಗರ, ಆ 24: ನಾಡಿನ ಸರ್ವರೂ ಉತ್ತಮ ಆರೋಗ್ಯ ಹೊಂದಬೇಕು. ಆ ಮೂಲಕ ಸದೃಢ ಸಮಾಜದಲ್ಲಿ ಶಾಂತಿ ನೆಮ್ಮದಿಯಿಂದ ಬದುಕಬೇಕೆಂದು ಆಯುಷ್ಯ ಹೋಮ ಮಾಡಿಸಲಾಗುತ್ತಿದೆ ಎಂದು ಕುಶಾಲನಗರದ ಸಾಮಾಜಿಕ ಸೇವಾ ಸಂಸ್ಥೆ ರಿಜಿಡ್ ಗ್ರೂಪ್ ನ ನಾಗ ಪ್ರವೀಣ್ ತಿಳಿಸಿದರು. ಕುಶಾಲನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶನಿವಾರ ಶ್ರಾವಣ ಮಾಸದ ಪ್ರಯುಕ್ತ ಶನಿ ದೇವರ ಕಥಾ ಶ್ರವಣ, ಗಣಪತಿ ಹೋಮ, ಮೃತ್ಯುಂಜಯ ಹೋಮ ಮತ್ತು ಆಯುಷ್ಯ ಹೋಮವನ್ನು ದೇವಸ್ಥಾನದ ಅರ್ಚಕರಾದ ಯೋಗೀಶ್ ಭಟ್ ಮತ್ತು ಗಿರೀಶ್ ಭಟ್ ನೇತೃತ್ವದಲ್ಲಿ ನಡೆಸಲಾಯಿತು ಎಂದು ಮಾಹಿತಿ ನೀಡಿದ ನಾಗ ಪ್ರವೀಣ್, ಇತ್ತೀಚಿಗೆ ಎಲ್ಲಿ ನೋಡಿದರೂ ಶಾಂತಿ ಕದಡುವ ವಾತಾವರಣದಿಂದ ಜನರು ನಿತ್ಯ ಆತಂಕದಲ್ಲೇ ಬದುಕಬೇಕಾಗಿದೆ. ಅಂತಹ ವಾಟವರಣಗಳು ನಿರ್ಮೂಲನೆಯಾಗಿ ಜನರು ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಬದುಕಲು ದೇವರ ಅನುಗ್ರಹ ಲಭಿಸಲಿ ಎಂದು ವಿವಿಧ ಹೋಮ ಹವನಗಳನ್ನು ಮಾಡಿಸಲಾಗಿದೆ ಎಂದು ತಿಳಿಸಿದರು.
ರಿಜಿಡ್ ಗ್ರೂಪ್ ನ ಕಾರ್ಯಕ್ರಮ ನಿರ್ದೇಶಕ ಎನ್.ವಿ.ಬಾಬು ಮಾತನಾಡಿ, ಇಡೀ ವಿಶ್ವ ಯುದ್ಧ ಭೀತಿಯಿಂದ ನಲುಗುತ್ತಿದೆ. ಮೂರನೇ ಮಹಾ ಯುದ್ಧದ ಕಾರ್ಮೋಡ ಜಗತ್ತಿನಲ್ಲಿ ಈಗ ಆವರಿಸಿದೆ. ನಮ್ಮ ಗ್ರೂಪ್ ನಿಂದ ವಿವಿಧ ಪೂಜೆ, ಹೋಮ ಮಾಡಿಸಿ ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡಲಾಗಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಬಿ.ಎಲ್.ಉದಯ್ ಕುಮಾರ್, ರಿಜಿಡ್ ಗ್ರೂಪ್ ನ ಎ.ಎಸ್.ಕುಮಾರ್, ವಿ.ಆರ್.ಮಂಜುನಾಥ್, ಎಸ್.ಎಂ.ನಾಗೇಂದ್ರ, ಪಿ.ಕೆ.ರಘು, ವಿ.ವಿ.ತಿಲಕ್, ಜಿ.ರಾಘವೇಂದ್ರ, ಚಿತ್ರ, ಪ್ರತಿಮಾ, ದೀಪಾ, ಶ್ವೇತ, ಹೇಮಾ ಇತರರು ಉಪಸ್ಥಿತರಿದ್ದರು.