ಕುಶಾಲನಗರ, ಆ 23: ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿ ವತಿಯಿಂದ ರಕ್ತ ನಿಧಿ ಕೇಂದ್ರ ಜಿಲ್ಲಾಸ್ಪತ್ರೆ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಸಹಭಾಗಿತ್ವದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಎರಡನೇ ವರ್ಷದ ಬೃಹತ್ ರಕ್ತದಾನ ಶಿಬಿರವನ್ನು ನಂಜರಾಯಪಟ್ಟಣ ನೂರುಲ್ ಇಸ್ಲಾಂ ಮದರಸದಲ್ಲಿ ಆಯೋಜಿಸಲಾಗಿತ್ತು.
ನಂಜರಾಯಪಟ್ಟಣ ಮಹಲ್ ಖತೀಬರಾದ ಮಹಮ್ಮದ್ ಸಹದಿ ಉಸ್ತಾದ್ ಪ್ರಾರ್ಥನೆ ಮಾಡುವುದರ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ನಂಜರಾಯಪಟ್ಟಣ ಗ್ರಾಮ ಪಂಚಾಯತಿ ಅಧ್ಯಕ್ಷ ಸಿ.ಎಲ್. ವಿಶ್ವ ಮಾತನಾಡಿ, ನಂಜರಾಯಪಟ್ಟಣ ಮುಸ್ಲಿಂ ಜಮಾತ್ ವತಿಯಿಂದ ಇಂತಹ ಸಮಾಜಮುಖಿ ಕಾರ್ಯ ಮಾಡುವುದು ತುಂಬಾ ಹೆಮ್ಮೆ ತರುವ ಸಂಗತಿಯಾಗಿದೆ. ಇದರಿಂದ ಗ್ರಾಮದಲ್ಲಿ ಸೌಹಾರ್ದತೆ ಮೂಡಲು ಸಹಕಾರಿ. ಇಂತಹ ಕಾರ್ಯಗಳಿಗೆ ಗ್ರಾಮ ಪಂಚಾಯಿತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು.
ರಕ್ತ ನಿಧಿ ಕೇಂದ್ರದ ಡಾ. ಕರುಂಬಯ್ಯ ಮಾತನಾಡಿ, ಇಂತಹ ಗ್ರಾಮೀಣ ಪ್ರದೇಶದಲ್ಲಿ ಈ ರೀತಿಯ ರಕ್ತದಾನ ಶಿಬಿರ ನಡೆಸುತ್ತಿರುವುದು ತುಂಬಾ ಸಂತೋಷ ಉಂಟು ಮಾಡುತ್ತದೆ. ಹಾಗೂ ನಂಜರಾಯಪಟ್ಟಣ ಮುಸ್ಲಿಂ ಜಮಾತ್ ಕಮಿಟಿಯ ಇಂತಹ ಸಾಮಾಜಿಕ ಕಾರ್ಯಕ್ರಮ ನಡೆಸುವುದರ ಬಗ್ಗೆ ಅಭಿನಂದನೆ ವ್ಯಕ್ತಪಡಿಸಿದರು.
ಜಮಾತಿನ ಅಧ್ಯಕ್ಷ ಎಂ.ಎ .ಅಮೀರ್ ಅಧ್ಯಕ್ಷತೆ ವಹಿಸಿದ್ದರು. ನೌಷದ್ ರವರು ಸ್ವಾಗತಿಸಿದರು ರಕ್ತದಾನ ಮಾಡಿದ 50ಕ್ಕೂ ಅಧಿಕ ಮಂದಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ವಿ. ಪ್ರೇಮಾನಂದ ಜಮಾತಿನ ಮಾಜಿ ಅಧ್ಯಕ್ಷ ಕೆ.ಬಿ. ಅಬ್ದುಲ್ಲಾ, ನಂಜುಂಡೇಶ್ವರ ಯುವಕ ಸಂಘದ ಅಧ್ಯಕ್ಷ ಮ್ಯಾಥ್ಯೂ, ಯೂತ್ ಕಮಿಟಿ ಅಧ್ಯಕ್ಷ ಮುಜಮಿಲ್, ಜಮಾತ್ ಕಾರ್ಯದರ್ಶಿ ಹಾರಿಸ್, ಉಪಾಧ್ಯಕ್ಷ ಬಶೀರ್, ಖಜಾಂಜಿ ಹ್ಯಾರಿಸ್, ಸದಸ್ಯರಾದ ಅನೀಸ್, ಶರೀಫ್, ಯೂಥ್ ಕಮಿಟಿ ಸದಸ್ಯ ಇರ್ಷಾದ್, ಸಿರಾಜ್ ಹನೀಫ್ ಅಶ್ರಫಿ ಬಶೀರ್ ರಿಯಾಜ್, ಕೆ.ಬಿ ಅಪ್ಸಲ್, ಬಾಸಿತ್, ಡಿಂಪಲ್, ಯಶವಂತ್ ಮತ್ತಿತರರು ಇದ್ದರು
Back to top button
error: Content is protected !!