ಶಿಕ್ಷಣ

ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಫಲಿತಾಂಶ

ಕುಶಾಲನಗರ, ಆ 19: ಮಂಗಳೂರು ವಿಶ್ವ ವಿದ್ಯಾನಿಲಯದ 2023 24ನೇ ಶೈಕ್ಷಣಿಕ ಸಾಲಿನ ಅಂತಿಮ ಪದವಿ ಫಲಿತಾಂಶ ಪ್ರಕಟಗೊಂಡಿದ್ದು, ಕುಶಾಲನಗರದ ಹಾರಂಗಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯುತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.
ಅಂತಿಮ ಬಿ.ಎ.ಯಲ್ಲಿ ಶೇ.95, ಅಂತಿಮ ಬಿಕಾಂ ನಲ್ಲಿ ಶೇ.94 ಮತ್ತು ಬಿಸಿಎ ಯಲ್ಲಿ ಶೇ.86 ರಷ್ಟು ಫಲಿತಾಂಶ ಬಂದಿದೆ.ಅದರಲ್ಲಿ‌ 20 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 14 ಮಂದಿ ಪ್ರಥಮ, 4 ಮಂದಿ ದ್ವಿತಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಅಂತಿಮ ಬಿ.ಕಾಂ ವಿದ್ಯಾರ್ಥಿ ಸಿ.ಎನ್ ಆಕಾಶ್ ಅವರು ಅಡ್ವಾನ್ಸ್ ಡ್ ಫಿನಾನ್ಸಿಯಲ್ ಮ್ಯಾನೆಜ್ ಮೆಂಟ್( Advanced financial management) ಎಂಬ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
ಹಾಗೆಯೇ, ಬಿಸಿಎ ತರಗತಿಯಲ್ಲಿ ಎಂ.ಎ. ಲತಾ ಮೊಬೈಲ್ ಅಪ್ಲಿಕೇಶನ್ ಡೆವಲಪ್ ಮೆಂಟ್ ( Mobile application development)ಎಂಬ ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದರೆ, ಎ.ಕೆ. ಸೌಜನ್ಯ ಪಿಹೆಚ್ ಪಿ ಅಂಡ್ ಮೈಎಸ್ ಕ್ಯೂಎಲ್( PHP and MySQL) ವಿಷಯದಲ್ಲಿ 100ಕ್ಕೆ 100 ಅಂಕಗಳನ್ನು ಪಡೆದಿರುತ್ತಾರೆ.
ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶವನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದಿದ್ದು,
ಕೊಡಗು ಜಿಲ್ಲೆಯ ಪದವಿ ಕಾಲೇಜುಗಳಲ್ಲಿ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತ್ಯುತ್ತಮ ಸಾಧನೆಯನ್ನು ಮಾಡಿದೆ ಎಂದು ಕಾಲೇಜಿನ ಪ್ರಾಚಾರ್ಯ ಬಿ.ಎಂ.ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!