
ಕುಶಾಲನಗರ, ಮೇ ,21: ಕುಶಾಲನಗರ ಪುರಸಭಾ ವ್ಯಾಪ್ತಿಯ ಗುಂಡುರಾವ್ ಬಡಾವಣೆಯಲ್ಲಿ ಹಳೆಯ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬದಲಿಗೆ ಹೊಸ ಟ್ರಾನ್ಸ್ ಫಾರ್ಮ್ರ್ ಅನ್ನು ಮಂಗಳವಾರ ಸಂಜೆ ಅಳವಡಿಸಲಾಯಿತು.
ಹಳೆಯದಾದ ಟ್ರಾನ್ಸ್‌ಫಾರ್ಮರ್ ಕಾರ್ಯಕ್ಷಮತೆ ಕುಗ್ಗಿ ಆಗಾಗ್ಯೆ ವಿದ್ಯುತ್ ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಮನಗಂಡ ಕುಶಾಲನಗರ ಪುರಸಭಾ ಸದಸ್ಯರಾದ ಎಂ.ಕೆ.ದಿನೇಶ್, ಪ್ರಮೋದ್‌ಮುತ್ತಪ್ಪ ಹಾಗೂ ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್ ಅವರು ಶಾಸಕ ಡಾ.ಮಂಥರ್ ಗೌಡ ಅವರ ಗಮನ ಸೆಳೆದಿದ್ದರು. ಈ ಹಿನ್ನಲೆಯಲ್ಲಿ ಮಂಗಳವಾರ ಚೆಸ್ಕಾಂ ಎಇಇ ಮಂಜುನಾಥ್ ಮತ್ತು ಸಿಬ್ಬಂದಿಗಳ ತಂಡ ನೂತನ ಟ್ರಾನ್ಸ್ಫಾರ್ಮರ್ ಅಳವಡಿಕೆ ಕಾರ್ಯ ನಡೆಸಿದರು.
ಗುಂಡುರಾವ್ ಬಡಾವಣೆ ವ್ಯಾಪ್ತಿಯಲ್ಲಿ ಹಲವು ಲೇಔಟ್ ಗಳಿದ್ದು ಎಲ್ಲಾ ಲೇಔಟ್ ಗೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕಿದೆ. ಶಿಥಿಲವಾಗಿರುವ
ವಿದ್ಯುತ್ ತಂತಿಗಳನ್ನು ಕೂಡಲೆ ಬದಲಾವಣೆ ಮಾಡಬೇಕಿದೆ ಎಂದು ಸ್ಥಳದಲ್ಲಿದ್ದ ಪುರಸಭಾ ಸದಸ್ಯ ದಿನೇಶ್ ಎಇಇ ಅವರನ್ನು ಒತ್ತಾಯಿಸಿದರು. ಎಲ್ಲಾ ಲೇಔಟ್ ಗಳನ್ನು ಪರಿಶೀಲಿಸಿ ಅಗತ್ಯ ಕ್ರಮವಹಿಸುವುದಾಗಿ ಮಂಜುನಾಥ್ ಅವರು ಭರವಸೆ ನೀಡಿದ್ದಾರೆ.
Back to top button
error: Content is protected !!