ಕುಶಾಲನಗರ, ಏ 25:ಚುನಾವಣೆಯಲ್ಲಿ ಸಮರ್ಥ ಅಭ್ಯರ್ಥಿ ಆಯ್ಕೆ ಎಲ್ಲರ ಹೊಣೆಯಾಗಿರುತ್ತದೆ ಆದರೆ ಈ ಒಣೆಗಾರಿಕೆಯಲ್ಲಿ ಹಲವಾರು ಮಂದಿ ದೂರ ಉಳಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕರವರು ಪ್ರತಿ ಚುನಾವಣೆಯಲ್ಲಿ ಚುನಾವಣಾ ಆಯೋಗ ಶೇಕಡ ನೂರರಷ್ಟು ಮತದಾನ ಮಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮತದಾನ ಮಾಡಲು ಪ್ರೇರಣೆಯಾಗುವಂತ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತಿದೆ ಆದರೂ ಕೂಡ ಶೇಕಡ ನೂರರಷ್ಟು ಮತದಾನ ಮಾಡಿಸುವಲ್ಲಿ ವಿಫಲವಾಗುತ್ತಿದೆ ನಮ್ಮ ದೇಶದ ಹಲವು ಪ್ರಜೆಗಳು ಮತದಾನದ ಗುರುತಿನ ಚೀಟಿಯನ್ನು ಕೇವಲ ಗುರುತಿನ ಚೀಟಿಯಾಗಿ ಮಾತ್ರ ಬಳಕೆ ಮಾಡುತ್ತಿದ್ದಾರೆ ಒಂದು ಬಾರಿ ಕೂಡ ಮತದಾನ ಮಾಡದೆ ಇರುವ ಹಲವು ಮಂದಿ ಈ ದೇಶದಲ್ಲಿದ್ದಾರೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಕಾನೂನು ರಚನೆ ಮಾಡಬೇಕು ಮತದಾನದ ಹಕ್ಕು ಪಡೆದ ವ್ಯಕ್ತಿ ನಿರಂತರವಾಗಿ 3 ಚುನಾವಣೆಯಲ್ಲಿ ಮತದಾನ ಮಾಡದೆ ಇದ್ದಲ್ಲಿ ಆ ವ್ಯಕ್ತಿಗೆ ಸರ್ಕಾರದ ಯಾವುದೇ ಸೌಲಭ್ಯಗಳನ್ನು, ಸೇವೆಗಳನ್ನು ಒದಗಿಸಬಾರದು ನಿರಂತರವಾಗಿ ಚುನಾವಣೆಯಲ್ಲಿ ಮತದಾನ ಮಾಡದೆ ಇರುವವರಿಗೆ ದೇಶದ ಪೌರತ್ವವನ್ನು ಕೂಡ ರದ್ದು ಮಾಡಬೇಕು, ದೇಶದ ಪ್ರತಿಯೊಬ್ಬ ಪ್ರಜೆಯು ಕೂಡ ಮತದಾನ ಮಾಡಿರುವ ದೃಢೀಕರಣವನ್ನು ಆಧಾರ್ ಕಾರ್ಡ್ ನಲ್ಲಿ ಲಿಂಕ್ ಮಾಡಿಸುವ ಮುಖಾಂತರ ಸರ್ಕಾರದ ಸೌಲಭ್ಯಗಳನ್ನು ಮತ್ತು ಸೇವೆಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
Back to top button
error: Content is protected !!