ಕುಶಾಲನಗರ, ಏ 24:
ಜೆಸಿಐ ನ 7 ಡೇಸ್ ಗೋಲ್ಡನ್ ವೀಕ್ ಬೇಸಿಗೆ ಶಿಬಿರದ 3ನೇ ದಿನ ಯೋಗ ಮತ್ತು ಶ್ಲೋಕಗಳ ಬಗ್ಗೆ ಅರಿವು ಮೂಡಿಸಲಾಯಿತು.
ಜೆಸಿಐ ಕಾರ್ಯದರ್ಶಿ ತೇಜದಿನೇಶ್ ಮಕ್ಕಳಿಗೆ ಆಧ್ಯಾತ್ಮಿಕ ಅಗತ್ಯತೆ ವಿದ್ಯಾಭ್ಯಾಸಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಅರಿವು ಮೂಡಿಸಿದರು.
ಜೆಸಿಐ ಕುಶಾಲನಗರ ಕಾವೇರಿಯ ಐಪಿಪಿ ರಜನಿಕಾಂತ್,ಸೋಶಿಯಲ್ ಮೀಡಿಯಾ ಇಂಪಾಕ್ಟ್ ಎಂಬ ವಿಷಯದ ಬಗ್ಗೆ ಶಿಬಿರರ್ಥಿ ಗಳಿಗೆ ಮಾಹಿತಿ ನೀಡಿ ಅವರಗಳ ನಡುವೆ ಸೋಶಿಯಲ್ ಮೀಡಿಯಾ ಇಮ್ಯಾಪಾಕ್ಟ್ ನ ಅನುಕೂಲ ಮತ್ತು ಅನಾನುಕೂಲದ ಬಗ್ಗೆ ಚರ್ಚಾ ಸ್ಪರ್ಧೆ ಮಾಡಿಸುವ ಮೂಲಕ ಮಕ್ಕಳಲ್ಲಿ ಹೊಸ ಉತ್ಸಾಹ ತುಂಬಿದರು.
ಸಂಪನ್ಮೂಲ ವ್ಯಕ್ತಿ ಡಾ.ಶ್ಯಾಮ್ ಪ್ರಸಾದ್ ಶಿಬಿರಾರ್ಥಿಗಳಿಗೆ ಆರೋಗ್ಯ ಮತ್ತು ಅದರ ನಿರ್ವಹಣೆ ಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಜೆಸಿಐ ಸದಸ್ಯರಾದ ಕೋಮಲ, ಕವಿತಾ ಮತ್ತಿತರರು ಹಾಜರಿದ್ದರು.
Back to top button
error: Content is protected !!