ಆರೋಪ

ವಾಲ್ನೂರು-ತ್ಯಾಗತ್ತೂರು ಅಪಘಾತ ಪ್ರಕರಣ: ಆರೋಪಿಗಳ ಪೋಟೊ ಬಿಡುಗಡೆಗೆ ಒತ್ತಾಯ

ಕುಶಾಲನಗರ, ಏ 20: ವಾಲ್ನೂರು-ತ್ಯಾಗತ್ತೂರು ಬಳಿ ನಡೆದ ಅಪಘಾತ ಪ್ರಕರಣಕ್ಕೆ‌ ಸಂಬಂಧಿಸಿದ ಇಬ್ಬರು ಆರೋಪಿಗಳ ಪೋಟೊ ಬಿಡುಗಡೆಗೆ ಒತ್ತಾಯ ಕೇಳಿಬಂದಿದೆ.

ಇತರೆ ಎಲ್ಲಾ ದುಷ್ಕೃತ್ಯಗಳಿಗೆ ಸಂಬಂಧಿಸಿದಂತೆ ಪೋಟೊ ಬಿಡುಗಡೆ ಮಾಡುವ ಪೊಲೀಸ್ ಇಲಾಖೆ ಈ ಪ್ರಕರಣದ ಆರೋಪಿಗಳ ವಿವರ ಗೌಪ್ಯವಾಗಿಟ್ಟಿರುವುದು ಖಂಡನೀಯ. ಕೂಡಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಫೊಟೊ ಬಿಡುಗಡೆ ಮಾಡುವಂತೆ ವಾಲ್ನೂರು ತ್ಯಾಗತ್ತೂರು ಭಾಗದ ಬಿಜೆಪಿ ಕಾರ್ಯಕರ್ತರು, ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳು ರತೀಶ್ ಸೇರಿದಂತೆ ಕುಶಾಲನಗರ ಬಿಜೆಪಿ ಅಧ್ಯಕ್ಷ ಚರಣ್ ಒತ್ತಾಯಿಸಿದರು.

ಈ ಪ್ರಕರಣದಲ್ಲಿ ಆರೋಪಿಗಳ ರಕ್ಷಣೆಗೆ ಜಿಲ್ಲೆಯ ಶಾಸಕರು ಮುಂದಾಗದಂತೆ ಚರಣ್ ಅಗ್ರಹಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!