ಕುಶಾಲನಗರ, ಏ 20: ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮೃತಪಟ್ಟು, ಬಾಲಕ ಗಾಯಗೊಂಡ ಘಟನೆ ಬಿಟ್ಟಂಗಾಲದಲ್ಲಿ ನಡೆದಿದೆ.
ಬೆಂಗಳೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಹಾಗೂ ವಿರಾಜಪೇಟೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಬಿಟ್ಟಂಗಾಲದಲ್ಲಿ ಅಪಘಾತವಾಗಿದೆ. ಗಾಯಾಳುಗಳನ್ನು ವಿರಾಜಪೇಟೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸ್ಕೂಟಿ ಚಾಲಕ ಮೃತಪಟ್ಟಿದ್ದಾನೆ. 11 ವರ್ಷದ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.
Back to top button
error: Content is protected !!