ಟ್ರೆಂಡಿಂಗ್

ಮಳೆಗಾಗಿ ದೇವರಿಗೆ ಮೊರೆ

ಸೋಮವಾರಪೇಟೆ, ಏ 19- ಏಪ್ರಿಲ್ ತಿಂಗಳು ಮುಗಿಯಲು ಬಂದರು ಇನ್ನೂ ವರುಣರಾಯ ಧರೆಗೆ ಇಳಿಯಲಿಲ್ಲ.
ನೀರಿಲ್ಲದೆ ಭೂಮಿ ಬಿರಿಯುತಿದೆ,ಪಶು ಪಕ್ಷಿಗಳು
ಚಡಪಡಿಸುತಿವೆ,ನೀರಿಗಾಗಿ ಪ್ರಾಣಿಗಳು ಪಟ್ಟಣಕ್ಕೆ ದಾಳಿಯಿಡುತಿವೆ, ರೈತಾಪಿವರ್ಗ ತತ್ತರಿಸಿ ಹೋಗಿದ್ದಾರೆ.ಎಲ್ಲಕ್ಕಿಂತ ಮಿಗಿಲಾಗಿ ಸೆಕೆ ತಡೆಯಲಾಗದೆ ಜನಸಾಮಾನ್ಯರು ನಲುಗಿಹೋಗಿದ್ದಾರೆ.
ಕಾವೇರಿ ಉಗಮ ಸ್ಥಾನ ಕೊಡಗಿನಲ್ಲಿಯೂ ಈ ಭಾರಿ ನದಿ,ಕೆರೆ ಕೆರೆಗಳೆಲ್ಲಾ ಬತ್ತಿ ಹೋಗಿದ್ದೂ ನೀರಿಗಾಗಿ
ಆಹಾಕಾರ ಶುರುವಾಗಿದೆ.
ಎಲ್ಲೆಡೆ ಜನ ಮಳೆಗಾಗಿ ದೇವರಿಗೆ ಮೊರೆಹೋಗುತಿದ್ದಾರೆ.
ಕೊಡಗು,ಹಾಸನ ಮಠಾಧಿಪತಿಗಳ ಪರಿಷತ್ತಿನ ಸ್ವಾಮೀಜಿಗಳು ಮಳೆಗಾಗಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟ ತಪ್ಪಲಲ್ಲಿ ಇರುವ ಶ್ರೀ.ಶಾಂತಮಲ್ಲಿಕಾರ್ಜುನ ಸ್ವಾಮಿ ದೇವಾಲಯದಲ್ಲಿ ಎರೆಡು ಜಿಲ್ಲೆಗಳ ಸ್ವಾಮೀಜಿಗಳು ವಿರಾಜಪೇಟೆ ಆರಮೇರಿ ಕಲಂಛೇರಿ ಮಠದ ಶ್ರೀ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ದೇವರಿಗೆ ರುದ್ರಾಭಿಷೇಕ,ಅಷ್ಟೋತ್ತರ,ಅರ್ಚನೆಯೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಹಾಮಂಗಳಾರತಿ ನಂತರ ಪ್ರಸಾದ
ವಿನಿಯೋಗ,ದಾಸೋಹ ನಡೆಯಿತು.
ಅರ್ಚಕರುಗಳಾದ ನಂದೀಶ್ ಶಾಸ್ತ್ರಿ,ಮೋಹನಮೂರ್ತಿಶಾಸ್ತ್ರಿ ಹಾಗೂ ಸೋಮಶೇಖರ ಶಾಸ್ತ್ರಿ ಗಳಿಂದ ಪೂಜಾ ವಿಧಿವಿಧಾನಗಳು ನೆರವೇರಿತು.
ಈ ಸಂದರ್ಭ ಅರಮೇರಿ ಶ್ರೀಗಳು ಮಾತನಾಡಿ ಈ ಭಾಗದ ಜನತೆಯ ಮನಸಿನಲ್ಲಿ ನೆಲೆನಿಂತಿರುವ,ಶಕ್ತಿವಂತ ದೇವಾಲಯ ಪುಷ್ಪಗಿರಿ ಶಾಂತಮಲ್ಲಿಕಾರ್ಜುನ ದೇವಾಲಯವಾಗಿದೆ.ಇಲ್ಲಿನ ಅಕ್ಕಪಕ್ಕದ ಜನರು,ರೈತಾಪಿ ವರ್ಗದವರು ಪ್ರತಿವರ್ಷ ಇಲ್ಲಿಗೆ ಆಗಮಿಸಿ ಬೆಟ್ಟಕ್ಕೆ ಹತ್ತಿ ಪೂಜೆ ಸಲ್ಲಿಸುವವಾಡಿಕೆ ನಡೆದು ಬಂದಿದೆ.
ಈ ಭಾರಿ ವಿಶೇಷವಾಗಿ ಕೊಡಗಿನಲ್ಲಿಯು ಬೇಸಿಗೆಯ ಧಗೆ ಹೆಚ್ಚಿದೆ ಮಳೆ ವಿಳಂಬವಾಗಿದೆ,ಜನಜೀವನ ಕಷ್ಟಕರವಾಗಿದೆ ಆ ಹಿನ್ನಲೆಯಲ್ಲಿ ಕೊಡಗು ಹಾಸನ ಮಠಾಧೀಶರ ಪರಿಷತ್ತು ವತಿಯಿಂದ ಸ್ವಾಮೀಜಿಗಳು ದೇವಾಲಯಕ್ಕೆ ಆಗಮಿಸಿ ಶಾಂತಮಲ್ಲಿಕಾರ್ಜುನ ಸ್ವಾಮಿಗೆ ಪೂಜೆ ಸಲ್ಲಿಸಿ,ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದ್ದೇವೆ ಎಂದರು. ಉತ್ತಮ ಪರಿಸರದಲ್ಲಿರುವ ದೇವಾಲಯ ಇನ್ನೂ ಸಾಕಷ್ಟು ಅಭಿವೃದ್ಧಿ ಸಾಧಿಸಬೇಕಾಗಿದೆ,ಇದಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಶ್ರಮಿಸುತ್ತಿದೆ ಆದರೂ ಭಕ್ತಾದಿಗಳು,ದಾನಿಗಳು ತಮ್ಮ ಸೇವೆ ಸಲ್ಲಿಸಬೇಕೆಂದು ತಿಳಿಸಿದರು.
ಈ ಸಂದರ್ಭ ಮಠಧೀಪತಿಗಳ ಪರಿಷತ್ತಿನ ಪ್ರದಾನ ಕಾರ್ಯದರ್ಶಿ ಮುದ್ದಿನಕಟ್ಟೆ ಮಠದ ಶ್ರೀ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ,ಕಾರ್ಯದರ್ಶಿ ಕಿರಿಕೂಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ತಪೂಕ್ಷೇತ್ರ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ,ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ,ಛಂಗಡಿ ಹಳ್ಳಿ ಮಠದ ಶ್ರೀ ಬಸವ ಮಹಾಂತ ಸ್ವಾಮೀಜಿ,ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ರಾಜ್ಯ ಸಂಚಾಲಕ ಎ.ಎಸ್.ಮಲ್ಲೇಶ,ತಾಲ್ಲೋಕು ಅಧ್ಯಕ್ಷ ಹಣಕೊಡು ಜಯರಾಜ್,ಅಕ್ಕನ ಬಳಗದ ಕಾರ್ಯದರ್ಶಿ ಮಾಯಾಗಿರೀಶ್, ದೇವಾಲಯ ಆಡಳಿತ ಮಂಡಳಿ ಸದಸ್ಯ ಗಣಪತಿ ಹಾಗೂ ಮುಂತಾದವರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!