ಕುಶಾಲನಗರ, ಮಾ 31: ಕೊಡಗು ಜಿಲ್ಲಾ ಬ್ಯೂಟಿಷಿಯನ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕುಶಾಲನಗರದ ಆರ್.ಲೋಕೇಶ್ ಅವರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಯಿತು.
ಲುಕ್ಸ್ ಬ್ಯೂಟಿ ಕೇರ್ ವತಿಯಿಂದ ಕುಶಾಲನಗರದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ನಿಷ್ಕ್ರಿಯವಾಗಿರುವ ಅಸೋಸಿಯೇಷನ್ ಬಲಪಡಿಸುವ ನಿಟ್ಟಿನಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.
ಕುಶಾಲನಗರ ಸಂಘದ ಸ್ಥಾಪನಾ ಅಧ್ಯಕ್ಷರಾದ ವನಿತಾ ಚಂದ್ರಮೋಹನ್ ಅವರ ಸಮ್ಮುಖದಲ್ಲಿ ಮಡಿಕೇರಿ ತಾಲೂಕು ಅಧ್ಯಕ್ಷರಾಗಿ ಪವಿತ್ರ, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ನಾಗಮಣಿ ಅವರನ್ನು ಆಯ್ಕೆ ಮಾಡಲಾಯಿತು.
ಮುಂದಿನ ದಿನಗಳಲ್ಲಿ ಉಳಿದ ತಾಲೂಕುಗಳಿಗೆ ಸೇರಿದಂತೆ ಜಿಲ್ಲಾ ಘಟಕಕ್ಕೆ ಎಲ್ಲರ ಸಮ್ಮುಖದಲ್ಲಿ ಪದಾಧಿಕಾರಿಗಳ ನೇಮಕಾತಿಗೆ ಕ್ರಮವಹಿಸಲು ಪ್ರಮುಖರು ನಿರ್ಧರಿಸಿದರು.
ಇದೇ ಸಂದರ್ಭ ತರಬೇತಿಯಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂದರ್ಭ ಅಸೋಸಿಯೇಷನ್ ಸಲಹೆಗಾರರಾದ ಚಂದ್ರಮೋಹನ್ ಇದ್ದರು.
Back to top button
error: Content is protected !!