ಕ್ರೈಂ

ಕುಶಾಲನಗರ, ಮಡಿಕೇರಿ ಬಿಜೆಪಿ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ: ಹಲವರ ಜೇಬಿಗೆ ಕತ್ತರಿ

ಬಿಜೆಪಿ ಕಾರ್ಯಕ್ರಮದಲ್ಲಿ 5 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿದ ಚೋರರು

ಕುಶಾಲನಗರ. ಮಾ 27: ಮಡಿಕೇರಿ ಮತ್ತು ಕುಶಾಲನಗರದಲ್ಲಿ ಕಳ್ಳರ ಕೈ ಚಳಕ.
ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ 25000, ಕೆ.ಜಿ. ಬೋಪಯ್ಯ ಅವರ ಜೇಬಿನಲ್ಲಿದ್ದ 17000 ಸೇರಿದಂತೆ ಅನೇಕರ ಜೇಬಿನಲ್ಲಿದ್ದ ಪರ್ಸ್ ಎಗರಿಸಿದ ಕಳ್ಳರು.
ಅಂದಾಜು 5 ಲಕ್ಷಕ್ಕೂ ಅಧಿಕ ಹಣ ಲಪಟಾಯಿಸಿದ ಕಳ್ಳರು.

ಇದು ಹೊರ ಜಿಲ್ಲೆಯಿಂದ ಬಂದ ಕಳ್ಳರ ತಂಡದ ಕೃತ್ಯ.
ಕಾರ್ಯಕ್ರಮದಲ್ಲಿ ನಾಲ್ಕೈದು ಹೊಸ ಮುಖ ಗಮನಿಸಿದೆ.
ಅಭ್ಯರ್ಥಿ ಯದುವೀರ್ ಜೊತೆ
ಸೆಲ್ಫಿ ತೆಗೆದುಕೊಳ್ಳುವಾಗ
ನೂಕು ನುಗ್ಗಲು ಸೃಷ್ಟಿಸಿ ಪರ್ಸ್ ಎಗರಿಸುವ ವ್ಯವಸ್ಥಿತ ಕಾರ್ಯ.

ವಾಹನದಲ್ಲಿ ಬಂದು ಇಂಥ ಕೃತ್ಯ ಮಾಡಿರುವ ಶಂಕೆ ವ್ಯಕ್ತ ಪಡಿಸಿದ ಮಾಜಿ ಶಾಸಕ ಅಪ್ಪಚ್ಚು ರಂಜನ್.

ಕಳ್ಳರ ಸದೆಬಡಿಯಲು ಪೊಲೀಸರಿಗೆ ರಂಜನ್ ಒತ್ತಾಯ.

ಪರ್ಸ್ ಜೊತೆ ಅನೇಕ ಅಮೂಲ್ಯ ಕಾರ್ಡ್ ಗಳ ಕಳ್ಳತನ.
ಪ್ರಕರಣದಿಂದ ಬೆಚ್ಚಿ ಬಿದ್ದಿರುವ ಬಿಜೆಪಿಗರು.
ಕಳ್ಳರ ಪತ್ತೆಗೆ ಪೊಲೀಸರ ಕಾರ್ಯಾ ಚರಣೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!