ಕಾರ್ಯಕ್ರಮ
ಕೂಡುಮಂಗಳೂರಿನಲ್ಲಿ ಕೂಸಿನ ಮನೆ ಲೋಕಾರ್ಪಣೆ
ಕುಶಾಲನಗರ, ಫೆ 16: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯಲ್ಲಿ ವಿಜಯನಗರದಲ್ಲಿ ಆರಂಭಿಸಿರುವ ಕೂಸಿನ ಮನೆಯನ್ನು ಕೂಡುಮಂಗಳೂರು ಗ್ರಾಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಲೋಕಾರ್ಪಣೆಗೊಳಿಸಿದರು.
ನಂತರ ಮಾತನಾಡಿದ ಅವರು, ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕಾರ್ಮಿಕರ ಮಕ್ಕಳ ಪಾಲನೆಗೆ ಸಹಕಾರಿಯಾಗಲಿದೆ. ಇತರೆ ಕೂಲಿ ಕಾರ್ಮಿಕರು ಕೂಡ ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸಿ ನಿಶ್ಚಿಂತೆಯಾಗಿ ಕೆಲಸಕ್ಕೆ ತೆರಳಬಹುದು. 6 ತಿಂಗಳಿಂದ ಮೂರು ವರ್ಷದ ಮಕ್ಕಳನ್ನು ಇಲ್ಲಿ ದಾಖಲಿಸಬಹುದು. ದಾಖಲಾದ ಮಕ್ಕಳನ್ನು ನಿಭಾಯಿಸಲು ಮೂವರು ಕೇರ್ ಟೇಕರ್ ಗಳನ್ನು ನಿಯೋಜಿಸಿ ತೆರಬೇತಿ ನೀಡಲಾಗಿದೆ. ಮಕ್ಕಳಿಗೆ ಇಲ್ಲಿ ಪ್ರತಿದಿನ ಪೌಷ್ಠಿಕ ಆಹಾರ ಒದಗಿಸಲಾಗುವುದು. ಜಿಲ್ಲೆಯಲ್ಲಿಯೇ ನಮ್ಮ ಗ್ರಾಪಂ ವತಿಯಿಂದ ಈ ಯೋಜನೆ ಅನುಷ್ಠಾನ ಸಮರ್ಪಕವಾಗಿ ಮಾಡಲಾಗಿದೆ ಎಂದು ತಿಳಿಸಿದರು.
- ಈ ಸಂದರ್ಭ ಗ್ರಾಪಂ ಸದಸ್ಯರಾದ ಗಿರೀಶ್, ಖತೀಜ, ಜ್ಯೋತಿ, ಈರಯ್ಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಅಂಗನವಾಡಿ ಶಿಕ್ಷಕಿಯರು ಇದ್ದರು.