ಕಾರ್ಯಕ್ರಮ

ನಂಜರಾಯಪಟ್ಟಣ ಗ್ರಾಪಂ: ಸಂವಿಧಾನ ದಿನಾಚರಣೆ, ಜಾಗೃತಿ‌ ಜಾಥಾ

ಕುಶಾಲನಗರ, ಫೆ 09: ಸಂವಿಧಾನದ ತಳಹದಿ ಎಲ್ಲರನ್ನು ಸಮಾನತೆ, ಎಲ್ಲರಿಗೂ ಸಮಬಾಳು ಕಲ್ಪಿಸಿದೆ. ಇಂತಹ‌ ಅಮೂಲ್ಯ‌ ಸಂವಿಧಾನವನ್ನು ದೇಶಕ್ಕೆ ಕೊಡುಗೆ ನೀಡಿದ ಡಾ.ಬಿ.ಅರ್.ಅಂಬೇಡ್ಕರ್ ಅವರು ಓರ್ವ ಮಹಾನ್ ಚೇತನ ಎಂದು ನಂಜರಾಯಪಟ್ಟಣ ಗ್ರಾಪಂ ಅಧ್ಯಕ್ಷ ಸಿ.ಎಲ್‌.ವಿಶ್ವ ತಿಳಿಸಿದರು.

ನಂಜರಾಯಪಟ್ಟಣ ಗ್ರಾಪಂ ವತಿಯಿಂದ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ
ಸಂವಿಧಾನ ದಿನಾಚರಣೆ ಸಭಾ ಕಾರ್ಯಕ್ರಮವನ್ನು ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ‌ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕಾಗಿ, ಸ್ವತಂತ್ರ್ಯಕ್ಕಾಗಿ ಹಲವರು ಹೋರಾಡಿ ಮಡಿದಿದ್ದಾರೆ. ಅಂತೆಯೇ ಸಂವಿಧಾನ ರಚಿಸುವ ಮೂಲಕ ಜನಸಾಮಾನ್ಯರ ಹಿತ ಕಾಯುವ ಆಯುಧದಂತೆ ಅಂಬೇಡ್ಕರ್ ಸಂವಿಧಾನ ರೂಪಿಸಿದ್ದಾರೆ. ಇಂತಹ ಮಹಾನ್ ಗ್ರಂಥದ ಆಶಯವನ್ನು ಎಲ್ಲರೂ ಪರಿಪಾಲಿಸಬೇಕಿದೆ. ರಾಷ್ಟ್ರ ರಕ್ಷಣೆಗೆ, ಅಭಿವೃದ್ಧಿ, ಜನಹಿತ, ಶಾಂತಿ, ಸುವ್ಯವಸ್ಥೆ ನಿರಂತರವಾಗಿ ನೆಲೆನಿಲ್ಲಲ್ಲು ಪ್ರಜೆಗಳು ಕಾರಣೀಭುತರಾಗಬೇಕಿದೆ ಎಂದರು.

ಸ್ಥಳೀಯ ಪ್ರೌಢಶಾಲಾ ಶಿಕ್ಷಕ ನಾಗರಾಜ್ ಸಂವಿಧಾನ ಮಹತ್ವದ ಕುರಿತು ಭಾಷಣ ಮಾಡಿದರು.
ಇದೇ ಸಂದರ್ಭ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಬಂಧ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.

ಗ್ರಾಪಂ ವ್ಯಾಪ್ತಿಯಲ್ಲಿ ಪೂರ್ಣಕುಂಭ ಕಳಶ ಹೊತ್ತ ಸಂಘಸಂಸ್ಥೆಗಳ ಮಹಿಳೆಯರ ಸಮ್ಮುಖದಲ್ಲಿ
ಸಂವಿಧಾನ ಜಾಗೃತಿ ರಥದ ಮೆರವಣಿಗೆ ನಡೆಸಲಾಯಿತು.
ಗ್ರಾಪಂ ಆಡಳಿತ ಮಂಡಳಿ, ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು, ಸಂಘಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ರಥದೊಂದಿಗೆ ರಿವರ್ ರಾಫ್ಟಿಂಗ್ ಸಿಬ್ಬಂದಿಗಳ ಬೈಕ್ ಜಾಥಾ, ಆದಿವಾಸಿ ಸಂಸ್ಕೃತಿ ಬಿಂಬಿಸುವ ನೃತ್ಯ ಪ್ರದರ್ಶನ ಗಮನ‌ ಸೆಳೆಯಿತು.
ಈ ಸಂದರ್ಭ ತಾಲೂಕು
ನೋಡಲ್ ಅಧಿಕಾರಿ ಬಿಇಒ‌ ಭಾಗ್ಯಮ್ಮ‌, ಜಿಲ್ಲಾ ನೋಡಲ್ ಅಧಿಕಾರಿ ಕೃಷ್ಣಪ್ರಸಾದ್, ಗ್ರಾಪಂ
ಉಪಾಧ್ಯಕ್ಷೆ ಕುಸುಮ,
ಸದಸ್ಯರಾದ ಲೋಕನಾಥ್, ಮಾವಾಜಿ ರಕ್ಷಿತ್, ಸಮೀರ, ಜಾಜಿ ತಮ್ಮಯ್ಯ, ಕುಸುಮ, ಪಿಡಿಒ ರಾಜಶೇಖರ್, ಕಾರ್ಯದರ್ಶಿ ಶೇಷಗಿರಿ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ಗಿರಿಜನ ಮುಖಂಡ ಜೆ.ಟಿ.ಕಾಳಿಂಗ, ಸಂಜೀವಿನಿ ಒಕ್ಕೂಟದ ಪದಾಧಿಕಾರಿ ಸರಿತಾ ಮತ್ತಿತರರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!