ಕುಶಾಲನಗರ, ಫೆ 06: ಸೋಮವಾರ ಸಂಜೆ ಕುಶಾಲನಗರದಲ್ಲಿ ನಡೆದ ಚೂರಿ ಇರಿತ, ಹತ್ಯೆ ಪಕರಣ ಸಂಬಂಧ ಕೊಡಗುಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.
ನಾಂಕ: 05-02-2024 ರಂದು ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿಗಳಾದ ಫವಾಜ್, ಇಸ್ಲಾಂ ಮತ್ತು ಸದಿದ್ ರವರುಗಳ ಫವಾಜ್ ರವರ ಕೆಎ-12 ಯು-4278 ರ ವೆಸ್ಪಾ ಸ್ಕೂಟಿಯನ್ನು ಸರ್ವಿಸ್ ಮಾಡಿಸುವ ಸಲುವಾಗಿ ಕುಶಾಲನಗರದ ಬಿ.ಎಂ ರಸ್ತೆಯಲ್ಲಿರುವ ಕೊಡಗನ ಮೋಟಾರ್ಸ್ ವೆಸ್ಪ ಶೋರೂಂಗೆ ಬಂದಿದ್ದು, ಸದಿದ್‌ನು ಅಲ್ಲಿಯೇ ಇದ್ದ ಕುರ್ಚಿಯಲ್ಲಿ ಕುಳಿತಿದ್ದು, ಫೈಜಲ್, ಫವಾಜ್ ಮತ್ತು ಇಸ್ಸಾಂ ಮೂರು ಜನರ ಅಲ್ಲೇ ನಿಂತುಕೊಂಡಿದ್ದೇವು. ಸಮಯ ಸುಮರು 06.05 ಗಂಟೆಗೆ ಶೋರೂಂ ಮಾಲೀಕರಾದ ಶ್ರೀನಿಧಿ ಬಂದು ಕುರ್ಚಿಯಲ್ಲಿ ಕುಳಿತಿದ್ದ ಸದಿದ್‌ನಿಗೆ ನನ್ನ ಕುರ್ಚಿಯಲ್ಲಿ ಕೂರಲು ನೀನು ಯಾವನು? ಎಂದು ಹೇಳಿ ಕೈಯಿಂದ ಕಪಾಳಕ್ಕೆ ಹೊಡೆದನು. ಅಲ್ಲಿಯೇ ಇದ್ದ ಶ್ರೀನಿಧಿಯ ಸ್ನೇಹಿತನಾದ ಅಲೀಂ ಬಂದು ಶ್ರೀನಿಧಿಗೆ ಬೆಂಬಲವಾಗಿ ನಿಂತು ನಾಲ್ಕು ಜನರಿಗೆ ನಿಂದಿಸಿರುತ್ತಾನೆ. ಫೈಜಲ್, ಫವಾಜ್ ಮತ್ತು ಇಸ್ಸಾಂ ಮೂರು ಜನ ಸೇರಿ ಶ್ರೀನಿಧಿ ಹಾಗೂ ಸದಿದ್ ರ ಜಗಳವನ್ನು ಬಿಡಿಸಿದ್ದು, ಶ್ರೀನಿಧಿಯು ಶೋರೂಂನ ಒಳಗೆ ಇದ್ದ ಟೈಲರಿಂಗ್ ಮಿಷನ್ ಮೇಲಿದ್ದ ಕತ್ತರಿಯನ್ನು ತೆಗೆದುಕೊಂಡು ಬಂದು ಏಕಾಏಕಿ ಸದಿದ್‌ನ ಬಲಭಾಗದ ಎದೆಯ ಭಾಗಕ್ಕೆ ಚುಚ್ಚಿ ಗಾಯಗೊಳಿಸಿ, ನಾನು ಹತ್ತು ವರ್ಷ ಜೈಲಿನಲ್ಲಿದ್ದರೂ ಪರವಾಗಿಲ್ಲ ನಿನ್ನನ್ನು ಸಾಯಿಸದೇ ಬಿಡುವುದಿಲ್ಲ ಎಂದು ಕೂಗಾಡುತ್ತಿದ್ದನು ಹಾಗೂ ಆತನ ಸ್ನೇಹಿತ ಅಲೀಂನು ಶ್ರೀನಿಧಿಯಾಗಿದ್ದಕ್ಕೆ ಎದೆಯ ಭಾಗಕ್ಕೆ ಚುಚ್ಚಿರುತ್ತಾರೆ. ನಾನಗಿದ್ದರೇ ನೇರವಾಗಿ ನಿನ್ನ ಕುತ್ತಿಗೆಯ ಭಾಗಕ್ಕೆ ಚುಚ್ಚಿ ಸಾಯಿಸುವುದಾಗಿ ಬೈಯುತ್ತಾ ಶ್ರೀನಿಧಿಗೆ ಬೆಂಬಲ ನೀಡಿರುತ್ತಾನೆ.
ಗಾಯಗೊಂಡ ಸದಿದ್‌ನನ್ನು ಚಿಕಿತ್ಸೆಗಾಗಿ ಆಟೋನಲ್ಲಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಆ್ಯಂಬುಲೆನ್ಸ್ ವಾಹನದಲ್ಲಿ ಫವಾಜ್ ಮತ್ತು ಇಸ್ಲಾಂ ರವರು ಮೈಸೂರಿನ ಎನ್.ಹೆಚ್ ಆಸ್ಪತ್ರೆಗೆ ಸೇರಿಸಲಾಗಿದ್ದು, ರಾತ್ರಿ ಸಮಯ 07.55 ಗಂಟೆಗೆ ಸದಿದ್ ಮೃತಪಟ್ಟಿರುವುದಾಗಿ ಫವಾಜ್‌ನು ದೂರವಾಣಿ ಕರೆ ಮಾಡಿ ತಿಳಿಸಿರುವುದರಿಂದ ಸದಿದ್‌ನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವ ಶ್ರೀನಿಧಿ ಹಾಗೂ ಕೃತ್ಯಕ್ಕೆ ಬೆಂಬಲಿಸಿದ ಶ್ರೀನಿಧಿಯ ಸ್ನೇಹಿತನಾದ ಅಲೀಂ ನ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಫಯಾಜ್ ರವರು ದೂರು ನೀಡಿದ್ದು, ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ.
ಶ್ರೀ ಅಮಿತ್ ಸಿಂಗ್, ಐಪಿಎಸ್, ಪೊಲೀಸ್ ಉಪ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಮತ್ತು ಶ್ರೀ ಕೆ.ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ರವರು ಘಟನೆ ಸ್ಥಳಕ್ಕೆ ಭೇಟಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ & ಸಾಕ್ಷ್ಯಾಧರಗಳ ಕುರಿತು ಮಾಹಿತಿ ಪಡೆದು ತನಿಖಾಧಿಕರಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗಿರುತ್ತದೆ ಹಾಗೂ ದೂರುದಾರರು ನೀಡಿದ ಮಾಹಿತಿ ಅನ್ವಯ ಅಪರಾಧ ಕೃತ್ಯ ಎಸಗಿದ ಆರೋಪಿಗಳಾದ ಶ್ರೀನಿಧಿ ಹಾಗೂ ಅಲೀಂ ಎಂಬುವವರನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ
Back to top button
error: Content is protected !!