ಶಿಕ್ಷಣ

ರಂಗಸಮುದ್ರ ಶಾಲೆಯಲ್ಲಿ ಮಕ್ಕಳ ಕೃತಿ ಅನಾವರಣ ಕಾರ್ಯಕ್ರಮ

ಕುಶಾಲನಗರ, ಫೆ 03: ರಂಗ ಸಮುದ್ರ ಸ.ಹಿ.ಪ್ರಾ ಶಾಲೆಯಲ್ಲಿ ವಸ್ತುಪ್ರದರ್ಶನ, ಮಕ್ಕಳ ಸ್ವರವಿತ ಕವನಗಳ ಹಾಗೂ ಪುಸ್ತಕಗಳ ಪರಿಚಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕೊಡಗು ಜಿಲ್ಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿದರು. ಮಕರಂದ ಎಖಬ ಶೀರ್ಷಿಕೆಯಡಿ ರಚಿತವಾದ ಮಕ್ಕಳ ಬರಹಗಳ‌ ಕೃತಿಯನ್ನು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ‌ ಭಾಗ್ಯಮ್ಮ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಮಕ್ಕಳ‌ ಬೆಳವಣಿಗೆಗೆ ಈ ರೀತಿಯ ವಿವಿಧ ಚಟುವಟಿಕೆಗಳು ಅಗತ್ಯ. ಶಿಕ್ಷಕರು ಅರ್ಪಣಾ ಮನಸ್ಸಿನಿಂದ ತೊಡಗಿಸಿಕೊಂಡರೆ ಸರಕಾರಿ ಶಾಲೆಯ ಅಭಿವೃದ್ಧಿ ಸಾಧ್ಯ. ಸ್ವತಃ ಮಕ್ಕಳೇ ರವಿತೆ ರಚಿಸಿರುವುದು ಶ್ಲಾಘನೀಯ. ಎಲ್ಲಾ ಶಾಲೆಗಳು ಈ ರೀತಿಯ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಳ್ಳುವಂತಾಗಬೇಕು ಎಂದರು.
ಕವಯತ್ರಿ ಹಾಗೂ ಶಿಕ್ಷಕಿ ರಮ್ಯ ಮೂರ್ ನಾಡು ಕೃತಿಯ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿ ಇದೊಂದು ಅಪರೂಪದ ಕಾರ್ಯಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಕೃಪಾ ದೇವರಾಜ್ ಕವನ ವಾಚನ ಮಾಡುವುದರ ಮೂಲಕ ಕವಿತೆ ವಾಚನದ ಪ್ರಾತ್ಯಕ್ಷಿಕೆ ನೋಡಿದರು.
ಸೋಮವಾರಪೇಟೆ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜು, ಶಾಲಾಭಿವೃದ್ದಿ‌ ಸಮಿತಿ ಅಧ್ಯಕ್ಷ ಕೇಶವ, ಸಿಅರ್ಪಿ ಸುಷ್ಮಾ, ವೈಶಾಲಿ, ಮುಖ್ಯ ಶಿಕ್ಷಕಿ ಲೀಲಾವತಿ, ಶಿಕ್ಷಕಿಯರಾದ ಸುನಿತಾ ವೀಣಾ, ರಜನಿ, ಪವಿತ್ರ ಹಾಗೂ ಪೋಷಕರು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!