ಪ್ರಕಟಣೆ

ಕುಶಾಲನಗರದಲ್ಲಿ ಇಂದು ( ಜ 21) ಸಿದ್ದಗಂಗಾ ಶ್ರೀಗಳ 5 ನೇ ವರ್ಷದ ಸ್ಮರಣೆ

ಕುಶಾಲನಗರ, ಜ 20: ನಡೆದಾಡುವ ದೇವರೆಂದೇ ಭಕ್ತವಲಯದಲ್ಲಿ ಪುನೀತರಾಗಿದ್ದ ಸಿದ್ದಗಂಗಾ ಶ್ರೀಗಳಾದ ಶಿವಕುಮಾರಸ್ವಾಮೀಜಿ ಗಳ ಐದನೇ ವರ್ಷದ ಪುಣ್ಯಸ್ಮರಣೆ ಕುಶಾಲನಗರದ ಸೋಮೇಶ್ವರ ದೇವಾಲಯದ ಆವರಣದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾನುವಾರ ( ಇಂದು )ಬೆಳಗ್ಗೆ 8-30 ಗಂಟೆಗೆ ಜರುಗಲಿದೆ.

ಬಳಿಕ ಸೋಮೇಶ್ವರ ದೇವರಿಗೆ ವಿಶೇಷ ಪೂಜೆ. ನಂತರ ಕುಶಾಲನಗರದ ಕಾಯಕ ಯೋಗಿಗಳಾದ ಪೌರಕಾರ್ಮಿಕರೊಂದಿಗೆ ಬೆಳಗಿನ ಉಪಹಾರ ದಾಸೋಹ ಏರ್ಪಡಿಸಲಾಗಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಬೇಕು ಎಂದು ಸಿದ್ದಗಂಗಾ ಶ್ರೀ ಭಕ್ತಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!