ಟ್ರೆಂಡಿಂಗ್

ಕೊಡಗು ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷರಾಗಿ ಡಿ. ವಿ. ಜಗದೀಶ್ ಆಯ್ಕೆ.

ಕುಶಾಲನಗರ, ಜ.21 ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಈಗಾಗಲೇ ದೇವಾಂಗ ಸಂಘದ ಅಧ್ಯಕ್ಷರುಗಳ ನೇಮಕಗೊಂಡಂತೆ ಕೊಡಗು ಜಿಲ್ಲೆಯ ದೇವಾಂಗ ಸಂಘದ ನೂತನ ಅಧ್ಯಕ್ಷರಾಗಿ ಡಿ.ವಿ. ಜಗದೀಶ್ , ಉಪಾಧ್ಯಕ್ಷರಾಗಿ ಡಿ. ವಿ ರಾಜೇಶ್, ಪ್ರಧಾನ ಕಾರ್ಯದರ್ಶಿಯಾಗಿ ಡಿ. ವಿ. ಚಂದ್ರಶೇಖರ್ ಅಯ್ಕೆಗೊಂಡಿರುತ್ತಾರೆ.
ಆಯ್ಕೆ ಪ್ರಕ್ರಿಯೆಯು ದೇವಾಂಗ ಜಗದ್ಗುರುಗಳಾದ ಶ್ರೀ. ಶ್ರೀ. ಶ್ರೀ. ದಯಾನಂದಪುರಿ ಮಹಾ ಸ್ವಾಮಿನವರ ಅದೇಶದನ್ವಯ ಜಿಲ್ಲೆಗೆ ಅಗಮಿಸಿದ ಸಂದರ್ಭದಲ್ಲಿ ತಿಳಿಸಿದರು.

ಅದರಂತೆಯೇ ರಾಜ್ಯ ದೇವಾಂಗ ಸಂಘದ ಅಧ್ಯಕ್ಷರಾದ ರವೀಂದ್ರ ಪಿ. ಕುಲ್ಬರ್ಗಿ ಆದೇಶ ಪತ್ರವನ್ನು ವಿತರಣೆ ಮಾಡಿದರು.
ನಂತರ ಮಾತಾಡುತ್ತಾ ಜಿಲ್ಲೆಯಲ್ಲಿ ಜನಾಂಗ ಸಂಘಟನೆಯ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೈಮಗ್ಗ, ಮತ್ತು ಜವಳಿ ಇಲಾಖೆಯ ವತಿಯಿಂದ ಸಿಗುವ ಯೋಜನೆಯ ಸವಲತ್ತುಗಳು, ಸೌಲಭ್ಯಗಳನ್ನು ನಿರುದ್ಯೋಗಿ ಯುವಕ ಸದುಪಯೋಗ ಪಡಿಸಿಕೊಂಡು ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳುವುದರ ಜೊತೆಯಲ್ಲಿ ಜವಳಿ ನೇಯ್ಗೆ ಮಾಡುವ ಮೂಲಕ ಸ್ವ-ಉದ್ಯೋಗವನ್ನು ಪ್ರಾರಂಭಿಸಿಕೊಳ್ಳು ಸಹಕಾರವಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಟಿ. ರಾಜೇಶ್, ಉಪಾಧ್ಯಕ್ಷ ಜೆ .ಕಾಂತ್ ರಾಜ್, ಕಾರ್ಯದರ್ಶಿ ಸಿ.ಎಲ್. ಧನಪಾಲ್, ರಾಜ್ಯ ಮಾಧ್ಯಮ ಕಾರ್ಯದರ್ಶಿ ಲಿಂಗರಾಜ ಡಿ. ನೋಣವಿನಕೆರೆ, ಸಂಘಟನಾ ಕಾರ್ಯದರ್ಶಿ ಕೊಳ್ಳೇಗಾಲ ಮೋಹನ್, ಸಹ , ಸಿ. ರಾಜಣ್ಣ , ಕುಶಾಲನಗರ ಚೌಡೇಶ್ವರಿ ದೇವಾಲಯ ಸಮಿತಿಯ ಅಧ್ಯಕ್ಷ ಡಿ. ವಿ ರಾಜೇಶ್, ಮಡಿಕೇರಿ ಚೌಡೇಶ್ವರಿ ಅಮ್ಮನವರ ದೇವಾಲಯ ಸಮಿತಿಯ ಅಧ್ಯಕ್ಷರು , ನಿರ್ದೇಶಕರು, ಸದಸ್ಯರು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!