ಪ್ರಕಟಣೆ

ಆಸ್ತಿ ತೆರಿಗೆ ಪಾವತಿ, ಉದ್ದಿಮೆ‌ ಪರವಾನಗಿ ನವೀಕರಿಸಲು ಸೂಚನೆ: ವಿಶೇಷ ರಿಯಾಯಿತಿ ಘೋಷಣೆ

ಕುಶಾಲನಗರ, ಡಿ 29: ಕುಶಾಲನಗರ ಪುರಸಭೆ ವತಿಯಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪಾವತಿಸುವ ಸಂಬಂಧ ವಿಶೇಷ ಆಂದೋಲನ ಆರಂಭಿಸಲಾಗಿದೆ. ಜ.1 ರಿಂದ 20 ರವರೆಗೆ ಪುರಸಭೆ ಕಛೇರಿ, ಮಹಿಳಾ ಸಮಾಜ ಕಟ್ಟಡದಲ್ಲಿ ಪಾವತಿಗೆ ಕೌಂಟರ್ ಆರಂಭಿಸಲಿದ್ದು ವಿಶೇಷ ರಿಯಾಯಿತಿ ಘೋಷಿಸಲಾಗಿದೆ.

ಇದರೊಂದಿಗೆ ಪ್ರಸಕ್ತ ಸಾಲಿನ ಉದ್ದಿಮೆ ಪರವಾನಗಿ‌ ನವೀಕರಣ, ಹೊಸ ಉದ್ದಿಮೆ ಪರವಾನಗಿ ಪಡೆದುಕೊಳ್ಳಲು ಸೂಚಿಸಲಾಗಿದೆ. ಇದರೊಂದಿಗೆ ಕನ್ನಡ ನಾಮಫಲಕ ಅಳವಡಿಕೆಗೆ ಕೂಡ ಪುರಸಭೆ ಸಾರ್ವಜನಿಕರ ಪ್ರಕಟಣೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗೆ ಪುರಸಭೆ ಸಂಪರ್ಕಿಸುವಂತೆ ಕೋರಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!