ಆರೋಪ

ಕೂಡುಮಂಗಳೂರು ಜನತಾ ಕಾಲನಿಯಲ್ಲಿ ರಸ್ತೆ ವಿವಾದ: ಎಸ್ಪಿಗೆ ದೂರು

ಕುಶಾಲನಗರ, ಡಿ 15: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ವಿಜಯನಗರ ಜನತಾ ಕಾಲನಿಯಲ್ಲಿ ತಿರುಗಾಡುವ ರಸ್ತೆ ಜಾಗಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿದೆ.

ದಿನೇಶ್ ಎಂಬವರ ಪತ್ನಿ‌ ಪಂಕಜ ಮತ್ತು ಸಂಬಂಧಿಕರಾದ ದೇವಮ್ಮ ಮತ್ತಿತರರು ಈ ಬಗ್ಗೆ ಕುಶಾಲನಗರದಲ್ಲಿ ಸುದ್ದಿಗೋಷ್ಢಿ ನಡೆಸಿದ್ದು,‌ ಪಕ್ಕದ‌ ಮನೆಯ ವ್ಯಕ್ತಿಯಿಂದ ವಿನಾಕಾರಣ ಕಿರುಕುಳ ಉಂಟಾಗುತ್ತಿದೆ. ಈ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ನೀಡಿದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ. ವಾಸದ ಮನೆಗೆ ನಿರ್ಮಿಸಿದ್ದ ರಸ್ತೆಯನ್ನು ಅಗೆದು ಹಾಕಲಾಗಿದ್ದು ತಿರುಗಾಡುವ ಸ್ಥಳಕ್ಕೆ ಬೇಲಿ ಅಳವಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸೂಕ್ತ ನ್ಯಾಯಕ್ಕೆ ಆಗ್ರಹಿಸಿ ಎಸ್ಪಿಗೆ ದೂರು ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!