ಕುಶಾಲನಗರ, ಡಿ 16: ಕರ್ನಾಟಕ ದಲಿತ ಸಂಘರ್ಷ ಸಮಿತಿ ಮತ್ತು ಆರ್.ಪಿ.ಐ.ಕೆ.ಕರ್ನಾಟಕ ಪಕ್ಷದ ಕೊಡಗು ಘಟಕದ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ರಾಜ್ಯಮಟ್ಟದ ಸಭೆ ಕುಶಾಲನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಕೆ.ಬಿ.ರಾಜು ತಿಳಿಸಿದರು.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ
ಡಿ.17 ರಂದು ಕುಶಾಲನಗರ ಮಹಾಲಕ್ಷ್ಮಿ ಸಭಾಂಗಣದಲ್ಲಿ ರಾಜ್ಯಮಟ್ಟದ ಸಭೆ ಹಮ್ಮಿಕೊಳ್ಳಲಾಗಿದೆ. ಪಕ್ಷವನ್ನು ಪುನರ್ ರಚಿಸಿ ಸಂಘಟನೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಆಸಕ್ತಿ ಹೊಂದಿರುವವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುವುದು. ಸಾಮಾಜಿಕ ಚಟುವಟಿಕೆಗಳು, ಹೋರಾಟಗಳ ಮೂಲಕ ನೊಂದವರ ಪರ ದನಿಯಾಗಬೇಕಿದೆ, ಸಮಸ್ಯೆಗಳ ವಿರುದ್ದ ಪ್ರತಿಭಟಿಸುವಂತಾಗಬೇಕಿದೆ. ಸರಕಾರದ ಸೌಲಭ್ಯಗಳನ್ನು ಪಡೆದು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲೂ ಸಂಘಟನೆ ಪದಾಧಿಕಾರಿಗಳು ಕ್ರಮವಹಿಸುವಂತಾಗಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸರ್ವರಿಗೂ ಸಮಪಾಲು,ಸಮಬಾಳು ದೊರಕಬೇಕೆಂಬುದು ಸಂಘಟನೆಯ ಆಶಯ.
ಅಂದು ಮುಕ್ತವಾಗಿ ಯಾರೂ ಬೇಕಾದರೂ ಪಕ್ಷ ಸೇರ್ಪಡೆಗೆ ಅವಕಾಶ ನೀಡಲಾಗಿದೆ ಎಂದರು.
ಮಹಿಳೆಯರ ಮೇಲಿನ ದೌರ್ಜನ್ಯ ಗಳು ಹೆಚ್ಚುತ್ತಿದ್ದು ಇದನ್ನು ತಡೆಗಟ್ಟುವಲ್ಲಿ ಸರಕಾರಗಳು ವಿಫಲವಾಗುಲಿವೆ.
ಉಚಿತಗಳ ಆಮೀಷಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಚುನಾವಣೆಗೆ ಎಸುರಿಸುತ್ತಿರುವ ಕ್ರಮ ಸರಿಯಲ್ಲ ಎಸಮದ ಅವರು ಸ್ಥಳೀಯ ಆಡಳಿತಗಳು ಕೂಡ ಜನಸಾಮಾನ್ಯರ ಅಭಿವೃದ್ದಿಗೆ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ ಎಂದರು.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಂದರರಾಜು ಮಾತನಾಡಿದರು.
ಈ ಸಂದರ್ಭ ಸಂಘಟನೆ ಪ್ರಮುಖರಾದ ಸ್ವಾಮಿ,ಮಂಜುನಾಥ್, ಸುರೇಶ್ ಕುಮಾರ್, ಕೆ.ಜೆ.ಸ್ವಾಮಿ ಇದ್ದರು.
Back to top button
error: Content is protected !!