ಕಾರ್ಯಕ್ರಮ
ಕುಶಾಲನಗರಕ್ಕೆ ಲಯನ್ಸ್ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ: ಸಭೆ
ಕುಶಾಲನಗರ, ಡಿ 14: ಸಮಾಜದ ತಳಮಟ್ಟದ ಜನರಿಗೆ ಸೇವೆಯನ್ನು ನೀಡುವ ಮೂಲಕ ಲಯನ್ಸ್ ಸಂಸ್ಥೆ ವಿಶ್ವದ ಎಲ್ಲೆಡೆ ಗುರುತಿಸಿಕೊಂಡಿದೆ ಎಂದು ಲಯನ್ಸ್ 317 ಡಿ ಜಿಲ್ಲಾ ರಾಜ್ಯಪಾಲರಾದ ಡಾ ಮೇಲ್ವಿನ್ ಡಿಸೋಜಾ ತಿಳಿಸಿದ್ದಾರೆ.
ಅವರು ಕುಶಾಲನಗರದ ಎ ಪಿ ಸಿ ಎಂ ಎಸ್ ಸಭಾಂಗಣದಲ್ಲಿ ನಡೆದ ಕುಶಾಲನಗರ ಮಡಿಕೇರಿ, ಶುಂಠಿಕೊಪ್ಪ ಲಯನ್ ಸಂಸ್ಥೆಗಳ ಜಂಟಿ ಕಾರ್ಯಕ್ರಮದಲ್ಲಿ ಅಧಿಕೃತ ಭೇಟಿ ನೀಡಿ ಮಾತನಾಡಿದರು.
ಕೊಡಗು ಜಿಲ್ಲೆಯಲ್ಲಿ ಲಯನ್ಸ್ ಮೂಲಕ ಎಲ್ಲೆಡೆ ಉತ್ತಮ ಕಾರ್ಯಗಳು ನಡೆಯುತ್ತಿದ್ದು ಕುಶಾಲನಗರ ಸಂಸ್ಥೆಯ ಪದಾಧಿಕಾರಿಗಳ ಕಾರ್ಯಕ್ರಮ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕುಶಾಲನಗರ ಮಡಿಕೇರಿ ಶುಂಠಿಕೊಪ್ಪ ಸಂಸ್ಥೆಗಳ ಕಾರ್ಯದರ್ಶಿಗಳು ತಮ್ಮ ಘಟಕದ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಸಭೆಗೆ ಮುನ್ನ ರಾಜ್ಯಪಾಲರಾದ ಮೇಲ್ವಿನ್ ಡಿಸೋಜಾ 3 ಘಟಕಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ಸಮಾರಂಭದಲ್ಲಿ ಜಿಲ್ಲಾ ರಾಜ್ಯಪಾಲರು ಮತ್ತು ಉಪ ರಾಜ್ಯಪಾಲರಾದ ಕುಡುಪಿ ಅರವಿಂದ ಶೆಣೈ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಪ್ರಾಂತೀಯ ಅಧ್ಯಕ್ಷರಾದ ಅಂಬೆಕಲ್ ನವೀನ್, ಸಿ ಕೆ ರೋಹಿತ್, ವಲಯ ಅಧ್ಯಕ್ಷರಾದ ಕೆ ಎಸ್ ಸತೀಶ್ ಕುಮಾರ್, ಕುಶಾಲನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾದ ವಿ ಎಸ್ ಸುಮನ್ ಬಾಲಚಂದರ್, ಕಾರ್ಯದರ್ಶಿ ಟಿ ಕೆ ರಾಜಶೇಖರ್ , ಖಜಾಂಚಿ ನಿತಿನ್ ಎನ್ ಗುಪ್ತ, ಮಡಿಕೇರಿ ಸಂಸ್ಥೆಯ ಅಧ್ಯಕ್ಷರಾದ ಡಿ ಮಧುಕರ್ ಶೇಟ್, ಕಾರ್ಯದರ್ಶಿ ನಟರಾಜ ಕೆಸ್ತೂರ್, ಖಜಾಂಚಿ ರವಿ ಎನ್.ಬಿ. ಸುಂಟಿಕೊಪ್ಪ ಸಂಸ್ಥೆಯ ಅಧ್ಯಕ್ಷರಾದ ಸಿ ವಿ ನಿಕೇಶ್, ಕಾರ್ಯದರ್ಶಿ ಪ್ರೀತಮ್ ಪ್ರಭಾಕರ್, ಖಜಾಂಚಿ ಟಿ.ಕೆ.ರಾಜೀವ್ ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಇದ್ದರು.