ಸಭೆ

ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ: ಪ್ರತಿಭಟನೆಗೆ ಮುಂದಾದ ಸದಸ್ಯ

ಕುಶಾಲನಗರ, ಫೆ 05: ಹೆಬ್ಬಾಲೆ ಗ್ರಾಪಂ ಸಾಮಾನ್ಯ ಸಭೆ ಪಂಚಾಯತಿ ಅಧ್ಯಕ್ಷೆ ಹೆಚ್.ಪಿ.ಅರುಣಕುಮಾರಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಆಗಬೇಕಿರುವ ಅಗತ್ಯ ಕಾಮಗಾರಿಗಳ ಬಗ್ಗೆ ಸದಸ್ಯರು ಸಭೆಯಲ್ಲಿ ನೂತನ ಪ್ರಭಾರ ಪಿಡಿಒ ಹೆಚ್.ಆರ್.ಮೋಹನ್ ಬಳಿ ವಿಚಾರ ಮಂಡಿಸಿದರು.
ಆಡಳಿತ ಮಂಡಳಿ ಸದಸ್ಯರ ಸಲಹೆ, ಸೂಚನೆಯಂತೆ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಒತ್ತು‌ ನೀಡಲಾಗುವುದು. ಆಂತರಿಕ ಕಲಹ ಬದಿಗೊತ್ತಿ ಗ್ರಾಮದಲ್ಲಿರುವ ಸಮಸ್ಯೆಗಳು, ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳ ಚರ್ಚೆಗೆ ಸದಸ್ಯರು ಒತ್ತು ನೀಡಬೇಕಿದೆ. ಎಲ್ಲರೂ ಒಗ್ಗೂಡಿ ಗ್ರಾಮದ ಅಭಿವೃದ್ಧಿ ಮುಂದಾಗಬೇಕಿದೆ. ಗ್ರಾಪಂ ಸಿಬ್ಬಂದಿಗಳಿಗೆ ಅಗತ್ಯ ಕಾರ್ಯಗಳನ್ನು, ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಅದರಂತೆ ಎಲ್ಲರೂ ಕಾರ್ಯನಿರ್ವಹಿಸಬೇಕಿದೆ ಎಂದು ಪಿಡಿಒ‌ ತಿಳಿಸಿದರು.
ಸಭೆಯಲ್ಲಿನ ನಿರ್ಣಗಳನ್ನು ಸಭೆಯ ದಿನದಂದೇ ಪ್ರೊಸೀಡಿಂಗ್ ಪುಸ್ತಕದಲ್ಲಿ ಸಮರ್ಪಕವಾಗಿ ದಾಖಲಿಸುವ ಕಾರ್ಯ ಆಗಬೇಕಿದೆ ಎಂದು ಸದಸ್ಯ ಮಂಜುನಾಥ್ ಆಗ್ರಹಿಸಿದರು.

ಸದಸ್ಯ ತನುಕುಮಾರ್ ವಾರ್ಡ್ ನಲ್ಲಿ ನಡೆಸಿದ ಕಾಮಗಾರಿ ಸಂಬಂಧ ತನಗೆ ಹಣ ಸಂದಾಯವಾಗಿಲ್ಲ ಎಂದು ಚೇತನ್ ಎಂಬ ಗುತ್ತಿಗೆದಾರ ಸಭೆಗೆ ಆಗಮಿಸಿ ಅಳಲು ತೋಡಿಕೊಂಡರು. ಇದರಿಂದ ತಾನು ಆತ್ಮಹತ್ಯೆಗೆ ಮುಂದಾಗುವುದಾಗಿ ಎಚ್ಚರಿಸಿದರು. ಈ ವಿಚಾರದ ಸಂಬಂಧ ಸಭೆಯಲ್ಲಿ ಅಧ್ಯಕ್ಷೆ ಅರುಣಕುಮಾರಿ, ಸದಸ್ಯ ತನುಕುಮಾರ್, ಮಂಜುನಾಥ್ ಹಾಗೂ ಗುತ್ತಿಗೆದಾರನ ನಡುವೆ ತೀವ್ರ ಚರ್ಚೆ, ವಾಗ್ವಾದ ನಡೆಯಿತು.

ಎಲ್ಲಾ ಸದಸ್ಯರ ವಾರ್ಡ್ ಗಳಲ್ಲಿ ಸ್ವಚ್ಚತೆ ಕಾಮಗಾರಿ ನಡೆದಿರುವ ಬಗ್ಗೆ ಸದಸ್ಯರು ಒಪ್ಪಿಕೊಂಡಿರುವ ಕಾರಣ ಗುತ್ತಿಗೆದಾರನಿಗೆ ಹಣ ಒದಗಿಸುವಂತೆ ಸದಸ್ಯ ಮಂಜುನಾಥ್ ಅಧ್ಯಕ್ಷರಲ್ಲಿ ತಾಕೀತು ಮಾಡಿದರು. ಇದೇ ಸಂದರ್ಭ ಅಧ್ಯಕ್ಷರ ಕಾರ್ಯವೈಖರಿ ಖಂಡಿಸಿ ಸದಸ್ಯ ತನುಕುಮಾರ್ ಸಭೆಯಲ್ಲಿ ಧರಣಿ ಕೂತರು.

Related Articles

Leave a Reply

Your email address will not be published. Required fields are marked *

Back to top button
error: Content is protected !!